ಉಡುಪಿ: ಸನಾತನ ಹಿಂದೂ ಸಂಸ್ಕೃತಿಯ ಸಂರಕ್ಷಣೆ-ಸಂವರ್ಧನೆಗಾಗಿ ವಿಶ್ವಮಾನ್ಯ ಯತಿಕುಲಚಕ್ರವರ್ತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯೊಂದಿಗೆ ಗೀತಾ ಮಂದಿರದ ನೃಸಿಂಹ ಸಭಾ ಭವನದಲ್ಲಿ ಶ್ರೀ ಪುತ್ತಿಗೆ ಸುಗುಣ ಶಿಬಿರವನ್ನು ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ , ಕಾಪು ಹೊಸ ಮಾರಿಗುಡಿಯ ರಾಜರ್ಷಿ ಶ್ರೀ ವಾಸುದೇವ ಶೆಟ್ಟಿ ಹಾಗೂ ಶ್ರೀನಿವಾಸ ಯುನಿವರ್ಸಿಟಿಯ ಕುಲಪತಿಗಳಾದ ಡಾ. ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಪ್ರಸ್ತಾವನೆ ಹಾಗು ನಿರೂಪಣೆಯನ್ನು ಶ್ರೀ ಕೆ.ವಿ.ರಮಣ ಆಚಾರ್ಯ ಹಾಗೂ ಶ್ರೀ ರಮೇಶ್ ಭಟ್ ನೆರವೇರಿಸಿದರು.

