ಉಡುಪಿ: ಮಂಗಳೂರು ಶಾಂತಿ ಸಭೆಗೆ ಬರುವಾಗ ಮಡದಿ ನಾನು ಬರ್ತೇನೆ ಅಂದರು, ಶ್ರೀಮತಿ ಅವರು ಬರ್ತೀನಿ ಅಂದಾಗ ಬೇಡ ಅನ್ನೋಕಾಗುತ್ತಾ? ಅವರ ಜೊತೆ ದೇವಸ್ಥಾನಕ್ಕೆ ಬಂದಿದ್ದೇನೆ ಎಂದು ಬೆಳ್ಮಣ್ಣು ದೇವಸ್ಥಾನದಲ್ಲಿ ಡಾ.ಜಿ .ಪರಮೇಶ್ವರ್ ಹೇಳಿಕೆ ನೀಡಿದರು.
ಶಾಸ್ತ್ರೋಕ್ತವಾಗಿ ಪೂಜೆ ಮಾಡಿದ್ದೇನೆ. ಜನಕಲ್ಯಾಣ, ಲೋಕಕಲ್ಯಾಣಕ್ಕಾಗಿ ಪೂಜೆ ನಡೆಸಿದ್ದೇನೆ. ರಾಜ್ಯದ ಹಿತ ಕಾಪಾಡಲು ಪ್ರಾರ್ಥನೆ ಸಲ್ಲಿಸಿದ್ದೇನೆ. ಸ್ವಾಭಾವಿಕವಾಗಿ ಆ ಪ್ರಾರ್ಥನೆಯ ಪ್ರಯೋಜನ ನಮಗೂ ಆಗುತ್ತೆ. ಈ ಭೇಟಿಯಲ್ಲಿ ವಿಶೇಷತೆ ಏನೂ ಇಲ್ಲ. ವಿಶೇಷವಾಗಿ ಏನೋ ಕೇಳಲು ಬಂದಿದ್ದೇನೆ ಎಂಬ ಕಲ್ಪನೆ ಬೇಡ ಎಂದರು.
2012 -13ರಲ್ಲಿ ಇಲ್ಲಿಗೆ ಬಂದಿದ್ದೆ, ಪಕ್ಷದ ಅಧ್ಯಕ್ಷನಾಗಿ ಗೆಲುವಿಗೆ ಪ್ರಾರ್ಥಿಸಿದ್ದೆ, 2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂತು. ತಾಯಿಯ ದರ್ಶನ ಮಾಡಿ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಕೇಳಿದ್ದೇನೆ. ರಾಜ್ಯದಲ್ಲಿ ಪ್ರತಿದಿನ ಅನೇಕ ಘಟನೆಗಳು ನಡೆಯುತ್ತಿವೆ. ಜನ ಸಮುದಾಯಕ್ಕೆ ಶಾಂತಿ ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಜನ ಸಮುದಾಯಕ್ಕೆ ಪ್ರಾರ್ಥನೆ ಸಲ್ಲಿಸಿದಾಗ ಅದರೊಳಗೆ ನನ್ನ ಪ್ರಾರ್ಥನೆಯೂ ಸೇರುತ್ತೆ. ಪ್ರತ್ಯೇಕವಾಗಿ ಏನು ಪ್ರಾರ್ಥನೆ ಮಾಡಿಲ್ಲ ಎಂದರು.

