ಉಡುಪಿ: ಕಚೇರಿಗಳ ಭೇಟಿ ಮಾಡಿ ನನಗೆ ಬಹಳ ನೋವಾಗಿದೆ. ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಗಲೀಜು ಹಾಕಲು ಓಪನ್ ಡ್ರಮ್ ಇಟ್ಟಿದ್ದಾರೆ. ಪ್ರತ್ಯೇಕ ಡಸ್ಟ್ ಬಿನ್ ಇರಿಸಲು ಸೂಚಿಸಲಾಗಿದೆ. ತಾಲೂಕು ಕಚೇರಿಯಲ್ಲಿ ತುಂಬಾ ಕೇಸುಗಳು ಪೆಂಡಿಂಗ್ ಇದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಹೇಳಿಕೆ ನೀಡಿದ್ದಾರೆ.
ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸರ್ಕಾರಿ ದಾಖಲೆಗಳು ಖಾಸಗಿ ಯಾಗಿ ಬ್ಯಾಗಿನಲ್ಲಿ ಇರಿಸಿಕೊಳ್ಳಲಾಗಿದೆ. ಮಾಜಿ ಸೈನಿಕರೊಬ್ಬರ ಭೂಮಿ ಏಳು ವರ್ಷ ಆದರೂ ಸರ್ವೇ ಮಾಡಿಲ್ಲ. ಅಟೆಂಡೆನ್ಸ್ ರಿಜಿಸ್ಟರ್ ಸಮರ್ಪಕವಾಗಿಲ್ಲ. ಸರ್ಕಾರಿ ನೌಕರ ಚಿಟ್ ಫಂಡ್ ದಾಖಲೆ ಇಟ್ಟುಕೊಂಡಿದ್ದಾರೆ. ಸರ್ಕಾರಿ ನೌಕರ ಚಿಟ್ ಫಂಡ್ ಮಾಡುವುದರಲ್ಲಿ ಅರ್ಥ ಇಲ್ಲ ಎಂದರು.
ಎಲ್ಲಾ ನೌಕರರು ಜೀನ್ಸ್ ಪ್ಯಾಂಟಿನಲ್ಲಿ ಬಂದಿದ್ದಾರೆ. ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್ ಇದೆ. ಆರಾಮಾಗಿ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬಂದಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಇಬ್ಬರು ಸಿಬ್ಬಂದಿಗಳ ಮೇಲೆ ಕೇಸ್ ರಿಜಿಸ್ಟರ್ ಮಾಡುತ್ತವೆ. ನನಗೆ ತುಂಬಾ ನೋವಾಗಿದೆ. ದೇಸಿ ಕಚೇರಿಯಲ್ಲಿ ಮೀಟಿಂಗ್ ಮಾಡಿದಾಗ ಇಲ್ಲಿಯ ಜನ ಬಹಳ ಬುದ್ಧಿವಂತರು ಎಂದಿದ್ದಾರೆ. ಇಲ್ಲಿ ಸಾಕ್ಷರರು, ಜಾಸ್ತಿ ಎಂದು ಹೇಳಿದ್ದಾರೆ.
ವಿದ್ಯಾವಂತ ಮೋಸಗಾರರಿಂದ ದೇಶ ಹಾಳಾಗುತ್ತಿದೆ. ಇಲ್ಲಿ ಅದರ ಉದಾಹರಣೆ ಕಾಣುತ್ತಿದೆ. ಏನೇ ಕೇಳಿದರೂ ಬಾಯಿ ಮುಚ್ಚಿ ಕೂತಿರುತ್ತಾರೆ. ಮೌನವೇ ಉತ್ತರ ಎಂಬಂತೆ ಇರುತ್ತಾರೆ. ಇಲ್ಲಿ ಅಧಿಕಾರಿಗಳು ವಿದ್ಯಾವಂತರಿದ್ದಾರೆ, ಆದರೆ ಮೋಸಗಾರರಿದ್ದಾರೆ. ನಮಗೇ ಯಾಮಾರಿಸುತ್ತಾರೆ. ಎಲ್ಲಾ ವಿಚಾರಗಳ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸುತ್ತೇವೆ. ಸರಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲು ಪರವಾನಿಗೆ ಸಿಕ್ಕಂತೆ ಆಗಿದೆ ಎಂದರು.

