ಉಡುಪಿ : ನದಿ ತೀರದಲ್ಲಿ ಹಸುವಿನ ರುಂಡಪತ್ತೆಯಾಗಿರುವ ಘಟನೆ ಉಡುಪಿಯ ಶಿರ್ವ ಠಾಣಾ ವ್ಯಾಪ್ತಿಯ ಕಲ್ಲಟ್ಟು ಎಂಬಲ್ಲಿ ನಡೆದಿದೆ. ನದಿ ತೀರದ ಪ್ರದೇಶದಲ್ಲಿ ಪತ್ತೆಯಾಗಿದೆ.

ಸ್ಥಳೀಯ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸರದ ಅನೇಕ ದೇವಾಲಯಗಳ ಪುಣ್ಯ ಸ್ನಾನ ನಡೆಯುವ ನದಿಯಾಗಿದ್ದು, ಈ ಭಾಗದಲ್ಲಿ ಪಾಪನಾಶಿನಿ ನದಿ ಎಂದೇ ಚಿರಪರಿಚಿತವಾಗಿದೆ.

ಶಿರ್ವ ವಿಷ್ಣುಮೂರ್ತಿ ದೇವಸ್ಥಾನ ಸೇರಿದಂತೆ, ಹಲವು ದೇಗುಲಗಳ ಜಳಕ ನಡೆಯುವ ಸ್ಥಳವಾಗಿದೆ. ನಿರ್ಜನ ಪ್ರದೇಶ ಗಮನಿಸಿಕೊಂಡು ಹಸುವಿನ ತ್ಯಾಜ್ಯವನ್ನು ದುಷ್ಕರ್ಮಿಗಳು ಎಸೆದಿದ್ದಾರೆ. ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿದ್ದಾರೆ.

ಪೊಲೀಸರು ಹಾಗೂ ಪಶುಸಂಗೋಪನ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ಮಹಜರು ನಡೆಯಿತು. ದುಷ್ಕರ್ಮಿಗಳ ಪತ್ತೆ ಮಾಡಲು ಹಿಂದೂ ಸಂಘಟನೆಗಳು ಒತ್ತಾಯಿಸಿದರು. ಹಿಂದೂ ಜಾಗರಣ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ ಪ್ರಮುಖರು ಒತ್ತಾಯಿಸಿದರು.

ಸ್ಥಳದಲ್ಲಿ ಜಮಾಯಿಸಿ, ತನಿಖೆಗೆ ಕಾರ್ಯಕರ್ತರು ಒತ್ತಾಯಿಸಿದರು. ದುಷ್ಕರ್ಮಿಗಳನ್ನು ಪತ್ತೆ ಮಾಡದಿದ್ದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಲಾಯಿತು. ಉಡುಪಿ ಜಿಲ್ಲೆ, ಕಾಪು ತಾಲೂಕು, ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

View this post on Instagram

A post shared by News Karnataka (@newskarnataka)