ಉಡುಪಿ :   ಭಾರೀ ಮಳೆ ಹಿನ್ನೆಲೆ ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.18ರ ಗುರುವಾರ ತಾಲೂಕಿನ ಆಯಾ ತಹಶೀಲ್ದಾರುಗಳು ಹಾಗೂ ಬಿಇಓ ರಜೆ ಘೋಷಣೆ ಮಾಡಿದ್ದಾರೆ. ಕೆಲವು ದಿನಗಳಿಂದ ಬಿರುಗಾಳಿ ಮತ್ತು ಮಳೆ ಆರ್ಭಟ ಜೋರಾಗಿದ್ದು ಹೊರಗೆ ಕಾಲಿಡದಂತಾಗಿದೆ. ಹೀಗಾಗಿ ಜಿಲ್ಲೆಗೆ ರೆಡ್‌ ಅಲರ್ಟ್‌ ಘೋಷಿಸಿದ್ದು,  ಎಚ್ಚರಿಕೆ ಹಿನ್ನಲೆ  ಬೈಂದೂರು ವಲಯದ ಎಲ್ಲಾ ಶಾಲೆಗಳಿಗೆ ಜು.18ರ ಗುರುವಾರ ಬಿಇಓ ರಜೆ ಘೋಷಣೆ ಮಾಡಿದ್ದಾರೆ.