ಉಡುಪಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಈ ಹಿನ್ನೆಲೆಯಲ್ಲಿ ಯಾಂತ್ರಿಕ ಮೀನುಗಾರಿಕೆ ಅವಧಿಕ್ಕಿಂತ ಮೊದಲೇ ಅಂತ್ಯಗೊಂಡಿದೆ. ನಷ್ಟದಲ್ಲೇ ಆಳ ಸಮುದ್ರ   ಮೀನುಗಾರಿಕೆ ಅಂತ್ಯಗೊಳಿಸಿದ ಮೀನುಗಾರರು ಸದ್ಯ ಕೈರಂಪಣಿ ಮೀನುಗಾರಿಕೆಯಲ್ಲಿ‌ ತೊಡಗಿಸಿಕೊಂಡಿದ್ದಾರೆ.

ರಾಕ್ಷಸ ಗಾತ್ರದ ಅಬ್ಬರದ ಅಲೆಗಳನ್ನು ಲೆಕ್ಕಿಸದೆ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದಾರೆ. ಮೀನುಗಾರ ಕಾರ್ಮಿಕರೇ ಸೇರಿ ನಡೆಸುವ ಮೀನುಗಾರಿಕೆ ಇದಾಗಿದ್ದು, ಸದ್ಯ ಮೀನುಗಾರರು ಕೈರಂಪಣಿ ಮೀನುಗಾರಿಕೆ ನಂಬಿ ದಿನ ಕಳೆಯುತ್ತಿದ್ದಾರೆ.

ಕೈರಂಪಣಿ ಮೀನುಗಾರಿಕೆ ಆರಂಭಿಸಿರುವ ಮೀನುಗಾರರಿಗೆ ಪಡುಕರೆಯಲ್ಲಿ ಬೃಹತ್ ಗಾತ್ರದ ಮೀನುಗಳು ಬಲೆಗೆ ಬಿದ್ದವೆ. ಸಾವಿರಾರು ರೂಪಾಯಿ ಮೌಲ್ಯ ಬಗೆ ಬಗೆಯ ಮೀನುಗಳು ದೊರಕಿವೆ. ಇದರಿಂದ ಅಳ ಸಮುದ್ರ ಮೀನುಗಾರಿಕೆ ಇಲ್ಲದೆ ಖಾಲಿ ಕುಳಿತ ಮೀನುಗಾರರಲ್ಲಿ ಮಂದಹಾಸ ಮೂಡಿದೆ.