ಉಡುಪಿ: ಹುಬ್ಬಳ್ಳಿ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ ವಿಚಾರವಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಮೇಲೆ ಗೂಂಡಾರಾಜ್ಯವಾಗಿದೆ. ಸರ್ಕಾರ ಬಂದಾಗಲೇ ಪಾಕಿಸ್ತಾನ ಕರ ಘೋಷಣೆ ಆಯಿತು. ವಿಜಯೋತ್ಸವದಲ್ಲಿ ಪಾಕಿಸ್ತಾನ ಧ್ವಜ ಹಾರಿತು. ಬೆಳಗಾಮ್ ನಲ್ಲಿ ಒಬ್ಬ ಮುನಿಯ ಹತ್ಯೆ ಆಯ್ತು ಎಂದರು.

ಹಲ್ಲೆ ಗೂಂಡಾ ಪ್ರವರ್ತನೆಗಳು ನಿತ್ಯ ನಿರಂತರವಾಗಿದೆ. ವಿಧಾನಸೌಧದ ಒಳಗೆ ಪಾಕಿಸ್ತಾನಕ್ಕೆ ಜಯಕಾರ ಹಾಕಿದರು. ಅವರನ್ನು ಬಂಧನ ಮಾಡಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅತ್ಯಾಚಾರಗಳು ಜಾಸ್ತಿ ಆಗುತ್ತಿದೆ. ಕೆಡಿಪಿ ಸಭೆಯಲ್ಲಿ ನಮ್ಮ ಶಾಸಕರ ಮೇಲೆ ಕಾಂಗ್ರೆಸ್ ಶಾಸಕರು ಕೈ ಎತ್ತುತ್ತಾರೆ. ಬಳ್ಳಾರಿಯಲಿ ಗುಂಡು ಹೊಡೆಯುತ್ತಾರೆ ಎಂದರು.

ಶಾಸಕರ ಸಹವರ್ತಿ ಅವರದ್ದೇ ಕಾರ್ಯಕರ್ತನನ್ನು ಕೊಲ್ಲುತ್ತಾರೆ. ಕಾಂಗ್ರೆಸ್ ಮತ್ತು ಸರಕಾರದ ಮಾನಸಿಕತೆಯನ್ನು ತೋರಿಸುತ್ತದೆ. ಎಲ್ಲಾ ಕೃತ್ಯವನ್ನು ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಸಮರ್ಥನೆ ಮಾಡುತ್ತಾರೆ. ರಾಮರಾಜ್ಯ ಗಾಂಧಿಯ ಕನಸು ನನಸಾಗಿಲ್ಲ ಇದು ರಾವಣ ರಾಜ್ಯ. ಕರ್ನಾಟಕ ಲಂಕಾಪುರ ಆಗುತ್ತಿದೆ. ರಾವಣನು ಕೂಡ ಸಿದ್ದರಾಮಯ್ಯನಂತೆ ಬುದ್ಧಿವಂತನಿದ್ದ ಎಂದರು.

ರಾವಣ ಕೂಡ ಸಿದ್ದರಾಮಯ್ಯನವರಂತೆ ಅದ್ಭುತ ಜ್ಞಾನಿಯಾಗಿದ್ದ. ಸಿದ್ದರಾಮಯ್ಯನವರ ಹೆಸರು ಬದಲಾವಣೆ ಯಾಗುತ್ತಿದೆಯಾ ಸಂಶಯ. ನಮ್ಮಲ್ಲೂ ಸೀತೆಯ ಅಪಹರಣವಾಗುತ್ತಿದೆ, ಸೀತೆಯ ಮೇಲೆ ಹಲ್ಲೆಗಳು ನಡೆಯುತ್ತಿದೆ. ರಾವಣ ರಾಜ್ಯ ನಡೆಯುತ್ತಿದೆ ಎಂದರು.