ಉಡುಪಿ : ತೆಂಗು ಬೆಳೆಗಾರರನ್ನು ಕಾಡುವ ಕುರುವಾಯಿ ಅಥವಾ ಕಪ್ಪುತಲೆ ಹುಳ ಬಾಧೆ ನಿಯಂತ್ರಿಸಲು ಹೊಸ ವಿಧಾನವನ್ನು ಆವಿಷ್ಕರಿಸಲಾಗಿದೆ. ಸೌತ್ ಕೆನರಾ ಕೊಕೊನಟ್ ಪ್ರೊಡ್ಯೂಸರ್ಸ್ ಕಂಪೆನಿ ಅವಿಷ್ಕರಿಸಿದ ಹೊಸ ಉತ್ಪನ್ನ ಇದರ ಮೂಲಕ ತೆಂಗುಬೆಳೆಯ ಕೀಟಬಾಧೆಯನ್ನು ನಿಯಂತ್ರಿಸಬಹುದು.
ಈ ಬಗ್ಗೆ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ನಡೆದ ಹಲಸು ಮೇಳದಲ್ಲಿ ಸಂಸ್ಥೆ ಈ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿತು. ಹಲಸು ಮಾವು ಮಾರಾಟದ ಜೊತೆಗೆ ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಪಟ್ಟ ಅನೇಕ ಮಳಿಗೆಗಳು ಜನಮನ್ನಣೆ ಪಡೆದವು. ಈ ಮೇಳದಲ್ಲಿ ಮಾವು ಹಲಸಿನ ಉತ್ಪನ್ನಗಳು, ಕಲ್ಪರಸ, ತೆಂಗಿನ ಬೆಲ್ಲ, ಗೆರಟೆಯ ಸೌಟು ಮತ್ತು ಇತರ ಅಲಂಕಾರಿಕ ವಸ್ತುಗಳು ಜನಾಕರ್ಷಣೆ ಪಡೆದವು.

