ಉಡುಪಿ: ಉಡುಪಿ ಶ್ರೀನಾರಾಯಣ ಗುರು ಯುವ ವೇದಿಕೆ ಮುತುವರ್ಜಿಯಲ್ಲಿ ಉಡುಪಿ ಬಲಾಯಿಪಾದೆ ಬಳಿ ಕುತ್ಪಾಡಿ ಗರಡಿ ರಸ್ತೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀನಾರಾಯಣ ಗುರುಗಳ ಸಮಾನತೆಯ ಮತ್ತು ಸಾಮರಸ್ಯದ ಸಂದೇಶ ಸಾರುವ ಶ್ರೀನಾರಾಯಣ ಗುರು ಉದ್ಯಾನವನಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ವಿನಯ ಕುಮಾರ್ ಸೊರಕೆ, ನಾರಾಯಣಗುರುಗಳು ಪ್ರತಿಪಾದಿಸಿದಂತೆ ಈ ಸಮಾಜದಲ್ಲಿ ತಾರತಮ್ಯ ತೊಲಗಲಿ, ಜಾತಿ ಜಾತಿಗಳ ನಡುವಿನ ಅಂತರ ದೂರವಾಗಲಿ. ಸರ್ವರೂ ಸಮಾನ ಎಂಬ ಸಂದೇಶ ಪಸರಿಸುವಲ್ಲಿ ಇಂತಹ ಕಾರ್ಯಕ್ರಮ ಇನ್ನಷ್ಟು ಹೆಚ್ಚು ಹೆಚ್ಚಾಗಿ ಮೂಡಿ ಬರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿದರು. ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ವಾಮನ ಬಂಗೇರ, ಯುವವಾಹಿನಿ ಅಧ್ಯಕ್ಷ ದಯಾನಂದ ಕರ್ಕೇರ, ಹರೀಶ್ ಪೂಜಾರಿ ಮಲ್ಪೆ, ಕಡೆಕಾರ್ ಗ್ರಾಪಂ ಅಧ್ಯಕ್ಷ ಜಯಕರ ಸೇರಿಗಾರ್, ಉಪಾಧ್ಯಕ್ಷ ನವೀನ್ ಶೆಟ್ಟಿ, ಪಂಚಾಯತ್ ಸದಸ್ಯರಾದ ರಾಘವೇಂದ್ರ ಕುತ್ಪಾಡಿ, ಪ್ರಶಾಂತ್ ಸಾಲಿಯಾನ್, ವೀಣಾ ಪ್ರಕಾಶ್, ಸುಲೋಚನ, ಕಿಶನ್ ಹೆಗ್ಡೆ, ಮುತ್ತಯ್ಯ ಕೋಟ್ಯಾನ್, ಶೇಖರ್ ಅಂಚನ್, ಯೋಗೇಶ್ ಕೋಟ್ಯಾನ್,

ಸಂತೋಷ್ ಕುಮಾರ್, ವಿಜಯ್ ಪೂಜಾರಿ, ಗಣೇಶ್ ಕುಮಾರ್, ಶೇಖರ್ ಕೋಟ್ಯಾನ್, ಗಿರೀಶ್ ಕುಮಾರ್ ಉದ್ಯಾವರ, ದಿನೇಶ್ ಜತ್ತನ್, ಪ್ರಕಾಶ್ ಪೂಜಾರಿ, ಹಬೀಬ್ ಅಲಿ, ರಾಯ್ಸ್ ಫೆರ್ನಾಂಡಿಸ್, ರಿಯಾಜ್ ಪಳ್ಳಿ, ಶ್ರೀನಂದ ಕಿಶೋರ್, ದಿವಾಕರ್ ಉದ್ಯಾವರ, ಲಕ್ಷ್ಮಣ ಸನಿಲ್, ಸಚಿನ್ ಸಾಲ್ಯಾನ್, ಸೋಮಸುಂದರ್ ಉಡುಪಿ, ಶಶಿಧರ್ ಬಂಗೇರ ಕಡೆಕಾರ್, ಬಾಲಕೃಷ್ಣ ಪೂಜಾರಿ, ಕುಕ್ಕುಂಜೆ, ಶಬರೀಷ್ ಸುವರ್ಣ, ಸಾಯಿರಾಜ್ ಕೋಟ್ಯಾನ್, ಸುಜಯ್ ಪೂಜಾರಿ, ಪ್ರಭಾಕರ ಕೋಟ್ಯಾನ್, ಸತೀಶ್ ಬೀರಪ್ಪಾಡಿ, ಸಚಿನ ಸಾಲ್ಯಾನ್, ರಘು ಸನಿಲ್, ಸುಪ್ರೀತ್ ಸುವರ್ಣ, ಸುಧಾಕರ್ ಉದ್ಯಾವರ, ಸುನೀಲ್ ಪೂಜಾರಿ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.

ಮಿಥುನ್ ಅಮೀನ್ ಸ್ವಾಗತಿಸಿದರು. ಸದಾಶಿವ ಅಮೀನ್ ವಂದಿಸಿದರು. ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.