ಉಡುಪಿ: ಹೆಜಮಾಡಿ ಟೋಲ್ ಬಳಿ ಟಯರ್ ಪಂಕ್ಚರ್ ಅಂಗಡಿಯಲ್ಲಿ ಬೆಂಕಿ ಅವಘಡ ಉಂಟಾದ ಘಟನೆ ಭಾನುವಾರ ಸಂಭವಿಸಿದೆ.

ಆಕಸ್ಮಿಕವಾಗಿ‌ ಉಂಟಾದ ಅಗ್ನಿ ಅವಘಡದಿಂದಾಗಿ ಬಾನೆತ್ತರಕ್ಕೆ ಹೊಗೆ ಆವರಿಸಿದೆ. ಸುತ್ತಮತ್ತಲಿನ ಗಿಡ ಮರಗಳು ಬೆಂಕಿಗಾಹುತಿಯಾಗಿವೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಸ್ಥಳೀಯರ ಸಮಯಪ್ರಜ್ಞೆಯಿಂದ ಹತ್ತಿರದ ಅಂಗಡಿಗಳಿಗೆ ಬೆಂಕಿ ವ್ಯಾಪಿಸುವುದು ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

View this post on Instagram

A post shared by News Karnataka (@newskarnataka)