ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ನಡೆದಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಆನೆಕೆರೆ ಬಳಿ ಇರುವ ಸದಾ ಕುಷನ್ ಅಂಗಡಿಯಲ್ಲಿ ನಡೆದಿದೆ.

ಸದಾನಂದ ಎಂಬುವರಿಗೆ ಸೇರಿದ ಸದಾ ಕುಷನ್ ಅಂಗಡಿಯಾಗಿದ್ದು, ಅಗ್ನಿ ಅವಘಡದಿಂದ ಅಂಗಡಿಯಲ್ಲಿದ್ದ ಕುಷನ್ ಉಪಕರಣಗಳು ಸುಟ್ಟು ಕರಕಲಾಗಿದೆ.

ಸುಮಾರು 20 ಲಕ್ಷ ಮೌಲ್ಯದ ಕುಷನ್ ವಸ್ತುಗಳು ಬೆಂಕಿಗಾಹುತಿಯಾಗಿದೆ. ಕಾರ್ಕಳ ಅಗ್ನಿ ಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.