ಉಡುಪಿ: ಬೈಂದೂರು ರೈತ ಸಂಘದ ಪ್ರತಿಭಟನೆ ತೀವ್ರಗೊಂಡಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮಗಳನ್ನು ಕೈಬಿಡುವಂತೆ ಉಗ್ರ ಹೋರಾಟ ನಡೆಸಲಾಯಿತು.

ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಗದ್ದಲ ಉಂಟು ಮಾಡಿದರು. ಹಸಿರು ಶಾಲು ಬೀಸುತ್ತ ಮೆರವಣಿಗೆಯಲ್ಲಿ ರೈತರು ಭಾಗಿಯಾದರು. ಬಾಯಿ ಬಡೆದುಕೊಳ್ಳುತ್ತಾ ಬೊಬ್ಬೆ ಹೊಡೆದು ರೈತರ ಆಕ್ರೋಶ ವಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಭತ್ತದ ಪೈರು ಹಡಿ ಮಂಚಕ್ಕೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿಗೆ ಗ್ರಾಮಪಟ್ಟರೆ ರೈತರಿಗೆ ಸಂಕಷ್ಟ ಎದುರಾಗಲಿದೆ. ಬೈಂದೂರು ತಾಲೂಕಿನಿಂದ ಪ್ರತಿಭಟನೆಗೆ ಸಾವಿರಾರು ರೈತರು ಬಂದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ತೀವ್ರಗೊಂಡಿತು. ಸ್ಥಳದಲ್ಲಿ ಊಟ ತಯಾರಿಸಿ ರೈತರು ಆಕ್ರೋಶ ಹೊರಹಾಕಿದರು. 11 ವಾರ್ಡುಗಳನ್ನು ಮಾತ್ರ ಉಳಿಸಿಕೊಂಡು 9 ವಾರ್ಡ್ ಕೈ ಬಿಡುವಂತೆ ಆಗ್ರಹಿಸಿದರು.

ಪಟ್ಟಣ ಪಂಚಾಯಿತ್  ರೈತರು, ಕೂಲಿ ಕಾರ್ಮಿಕರು ಬಡವರಿಗೆ ಮರಣ ಶಾಸನವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೃಪಾಂಕ ಸಮಸ್ಯೆ ಉಂಟಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೈತಪ್ಪುತ್ತದೆ. ತೆರಿಗೆಯ ಹೊರೆ ಹೊರಲು ಸಾಧ್ಯವಿಲ್ಲ. ಆಕ್ರೋಶಗೊಂಡ ರೈತರಿಂದ ಜಿಲ್ಲಾಧಿಕಾರಿ ಕಚೇರಿ ಗೆ ನುಗ್ಗಲು ಯತ್ನ ನಡೆಯಿತು.