ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ವಿಚಾರವಾಗಿ ದೇವಾಲಯದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಹೇಳಿಕೆ ನೀಡಿದ್ದಾರೆ.

ರಾಜ್ಯದ ಎ ಗ್ರೇಡ್ ದೇವಾಲಯಗಳಿಗೆ ಬರುವ ಭಕ್ತರಿಗೆ ಸಹಾಯವಾಗುವಂತೆ  ಸರ್ಕಾರ ಹಲವಾರು ವರ್ಷದಿಂದ ಸರ್ಕಾರಿ ವೆಬ್ಸೈಟ್ ಇದೆ. ಅದು ಕರ್ನಾಟಕ ಟೆಂಪಲ್ಸ್ ಅಕಮಡೇಶನ್ ಹೆಸರಿನಲ್ಲಿದೆ. ನಕಲಿ ವೆಬ್ ಸೈಟ್ ಕರ್ನಾಟಕ ಟೆಂಪಲ್ ಅಕಮಡೇಶನ್ ಹೆಸರಿನಲ್ಲಿರುತ್ತದೆ.

ರಾಜ್ಯ ಸರ್ಕಾರದ ಹೆರನಲ್ಲಿರುವ ವೆಬ್ ಸೈಟ್ ನಲ್ಲಿ ಕ್ಯೂಅರ್ ಕೋಡ್ ಕಳುಹಿಸಿಕೊಡುವ ಪದ್ಧತಿ ಇಲ್ಲ. ನಕಲಿ ವೆಬ್ ಸೈಟ್ ನಲ್ಲಿ ಮಾತ್ರ ಕ್ಯೂಆರ್ ಕೋಡ್ ಕಳುಹಿಸಿ ಕೊಡಲಾಗುತ್ತದೆ‌. ಕೊಲ್ಲೂರಿಗೆ ಭಕ್ತರು ಇದರ ಬಗ್ಗೆ ಗಮನಹರಿಸಬೇಕು. ನಕಲಿ ವೆಬ್ ಸೈಟ್ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರಕ್ಕೂ ಇದರ ಬಗ್ಗೆ ಗಮನಕ್ಕೆ ತರಲಾಗಿದೆ. ಭಕ್ತರು ನಕಲಿ ವೆಬ್ ಸೈಟ್ ಹೆರನಲ್ಲಿ ಕೊಠಡಿ ಬುಕ್ ಮಾಡಬೇಡಿ ಎಂದು ಕೊಲ್ಲೂರು ದೇವಾಲಯ ಆಡಳಿತ ಮಂಡಳಿ ಟಿವಿ ಮೂಲಕ ಮನವಿ ಮಾಡಿಕೊಂಡಿದ್ದಾರೆ.