ಉಡುಪಿ: ಖಾಸಗಿ ಬಸ್ ಗಳ ಹುಚ್ಚಾಟ ಉಡುಪಿಯಲ್ಲಿ ಮಿತಿಮೀರಿದ್ದು, ಏಕಾಏಕಿ ಬ್ರೇಕ್ ಹಾಕಿ ಬಸ್ 180 ಡಿಗ್ರಿ ಸುತ್ತಿದೆ. ಬಸ್ ನೊಳಗೆ ಕುಳಿತಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಇಷ್ಟಾದರೂ ಏನೂ ಆಗದಂತೆ ಅತಿ ವೇಗದಿಂದ ಚಾಲಕ ಬಸ್ ಓಡಿಸಿದ್ದಾನೆ.

ಕುಂದಾಪುರದಿಂದ ಉಡುಪಿ ನಗರ ಪ್ರವೇಶಿಸುತ್ತಿದ್ದ ಬಸ್ ಆಗಿದ್ದು, ಮತ್ತೊಮ್ಮೆ ರಾಂಗ್ ಸೈಡ್ ನಲ್ಲಿ ಹೋಗಿ, ಯೂಟರ್ನ್ ತೆಗೆದುಕೊಂಡು ಅತಿ ವೇಗದಿಂದ ಬಸ್ ಮುಂದುವರಿದಿದೆ. ನಗರದ ಬನ್ನಂಜೆ ಬಳಿ ಈ ಘಟನೆ ನಡೆದಿದೆ.

ದುರ್ಗಾಂಬ ಬಸ್ ಚಾಲಕನ ಹುಚ್ಚಾಟಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಖಾಸಗಿ ಬಸ್ ಚಾಲಕರು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯ ಮಾಡಲಾಗಿದೆ.