ಉಡುಪಿ: ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಸೈಡಿನಲ್ಲಿ ಕೂರಿಸಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಬೇಕು. ಗುಜರಾತಿನ ಅಹ್ಮದಾಬಾದ್ ನಲ್ಲಿ ಕಾಂಗ್ರೆಸ್ ನ ಅಧಿವೇಶನ, ಪ್ರಾರ್ಥನಾ ಸಭೆಯಲ್ಲಿ ಸೋಫಾದಲ್ಲಿ ಎಐಸಿಸಿ ಅಧ್ಯಕ್ಷರಿಗೆ ಸ್ಥಾನ ಇಲ್ಲ. ಕಾಂಗ್ರೆಸ್ ನ ಅತ್ಯುನ್ನತ ನಾಯಕ ನನ್ನು ದಲಿತ ಎಂಬ ಕಾರಣಕ್ಕೆ ಸಪರೇಟ್ ಸೈಡಲ್ಲಿ ಕುರ್ಚಿ, ಸೆಂಟರ್ ಪ್ರೇಮ್ ನಲ್ಲಿ ಸೋನಿಯಾ ರಾಹುಲ್, ಖರ್ಗೆ ಸೈಡ್ ಲೈನ್ ಎಂದು ಉಡುಪಿಯಲ್ಲಿ ಶಾಸಕ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರ ಜೊತೆ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಗಮನಿಸಿ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು ಆತ ಸಭಾಂಗಣದ ಮಿಡಲ್ ಫ್ರೇಮ್ ನಲ್ಲಿ ಇರಬೇಕು. ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಸೈಡಿನಲ್ಲಿ ಕೂರಿಸಿದ್ದಾರೆ. ಬೇರೆ ಬೇರೆಯವರು ಎಲ್ಲೆಲ್ಲಿ ಕೂತಿದ್ದರು ಗಾಂಧಿ ಕುಟುಂಬ ಖರ್ಗೆಗೆ ಕೊಟ್ಟ ಮರ್ಯಾದೆ ಏನು. ದಲಿತ ನಾಯಕನನ್ನ ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದೆ ನೋಡಿ ಎಂದರು.
ರಾಷ್ಟ್ರೀಯ ಅಧ್ಯಕ್ಷ ಆಗಿದ್ದರೂ ದಲಿತ ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಳ್ಳಲಾಗಿದೆ. ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಬೆಂಕಿ ಹಾಕಿದಾಗಲೂ ಇದೇ ವರ್ತನೆ. ರಾಷ್ಟ್ರೀಯ ಅಧ್ಯಕ್ಷರಿಂದ ಕಾಲೋನಿಯ ದಲಿತ ಬಂಧುವಿನವರೆಗೆ ಕಾಂಗ್ರೆಸ್ ಇದೆ ಧೋರಣೆಯನ್ನು ತಾಳುತ್ತದೆ. ದಲಿತರ ತುಷ್ಟೀಕರಣ ಮಾಡಿದೆ ಹೊರತು ದಲಿತರ ಉದ್ದಾರ ಕಾಂಗ್ರೆಸ್ ಮಾಡಿಲ್ಲ. ಅಂಬೇಡ್ಕರ್ ಗೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. ಖರ್ಗೆ ಸ್ವಾಭಿಮಾನ ಇದ್ದಿದ್ರೆ ಅಧಿವೇಶನದ ಎದ್ದು ಬರಬೇಕಾಗಿತ್ತು. ಸೋಫಾದಲ್ಲಿ ಕೂರಲು ಬಿಟ್ಟಿಲ್ಲ ಮರದ ಕುರ್ಚಿಯಲ್ಲಿ ಸೈಡಲ್ಲಿ ಕೂರಿಸಿದ್ದಾರೆ ಎಂದರು.

