ಉಡುಪಿ: 20ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಛೋಲಿಕೆ ಪೀಚೆ ಕ್ಯಾಹೆ ಡ್ಯಾನ್ಸ್ ಮಾಡಲಾಯಿತು. ಕುಂದಾಪುರ ತಾಲೂಕಿನ ಆನೆಗುಡ್ಡೆ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಕಾರ್ಯಕ್ರಮ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಕುಂದಾಪುರ ತಾಲೂಕು ಘಟಕ ಆಯೋಜಿಸಿದೆ. 20 ನೇ ಸಾಹಿತ್ಯ ಸಮ್ಮೇಳನದ ನುಡಿ ಬೆಳಕು ಕಾರ್ಯಕ್ರಮದಲ್ಲಿ ಅಚಾತುರ್ಯ ನಡೆಯಿತು. ಅನ್ಯ ಭಾಷೆಯ ಹಾಡಿಗೆ ಯುವತಿ ಬೇಕಾಬಿಟ್ಟಿ ಕುಣಿದಿದ್ದಾಳೆ. ಹಾಡು ಮುಗಿಯುವವರೆಗೂ‌ ಕಣ್ಣು ಬಿಟ್ಟು ಆಯೋಜಕರು ಮನೋರಂಜನೆ ಪಡೆದರು.

ಆಯೋಜಕರ ಜಾಣಕಿವುಡಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಮೌನವಾಗಿದ್ದರು. ಜಿಲ್ಲಾಧ್ಯಕ್ಷರು, ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು.

View this post on Instagram

A post shared by News Karnataka (@newskarnataka)