ಉಡುಪಿ: ಉಡುಪಿ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ, ಕಾಪು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಶಕ್ತಿ ಯೋಜನೆಯ ಅಡಿಯಲ್ಲಿ 500 ಕೋಟಿ ಪ್ರಯಾಣ ಸಂಭ್ರಮವನ್ನು ಪಂಚ ಗ್ಯಾರೆಂಟಿ ಸಮಿತಿ ಕಚೇರಿ ಮುಂಭಾಗದಲ್ಲಿ ಆಚರಿಸಲಾಯಿತು.

ಮಂಗಳೂರಿನಿಂದ ಉಡುಪಿ ಸರ್ಕಾರಿ ಬಸ್ ನಿಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕಾಪು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ನವೀನ್ ಚಂದ್ರ ಎಸ್ ಸುವರ್ಣ ಮಾತನಾಡಿ, ಶ್ರೀ ಶಕ್ತಿ ಯೋಜನೆ ಉಡುಪಿ ಜಿಲ್ಲೆಯಾದ್ಯಂತ ಮಹಿಳೆಯರು ಇದರ ಪ್ರಯೋಜನವನ್ನು ಪಡೆದಿದ್ದಾರೆ ದೇವಾಲಯ ಸಂದರ್ಶನ ತಮ್ಮ ದೂರದ ಊರಿಗೆ ಪ್ರಯಾಣ ಮಾಡಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಸಿದ್ದರಾಮಯ್ಯರವರ ಅತ್ಯುತ್ತಮ ಯೋಚನೆ ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರುಗಳಾದ ಪ್ರಭಾಕರ ಆಚಾರ್ಯ ಕಟಪಾಡಿ, ಸುಧೀರ್ ಎಸ್ ಕರ್ಕೇರ, ಕೀರ್ತಿ ಕುಮಾರ್, ರೀನಾ ವಿನುತ ಡಿ ಸೋಜಾ, ಉದಯ್ ಸಿ , ಲವ ಕರ್ಕೇರ , ಕಾಪು ಪುರಸಭೆ ಸದಸ್ಯರಾದ ದೇವರಾಜ್ ಕೋಟ್ಯಾನ್ , ಕಾಪು ತಾಲೂಕು ಪಂಚಾಯತ್ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.