ಉಡುಪಿ: ಜಾತಿ ಜನಗಣತಿ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಕಾದು ನೋಡುವ ತೀರ್ಮಾನ ಮಾಡಿದೆ. ವರದಿಯ ಅಂಗೀಕಾರ, ಸ್ವೀಕಾರ, ಪ್ರಕಟಣೆ ಬಿಡುಗಡೆ ಈ ವಿಚಾರದಲ್ಲಿ ಸರ್ಕಾರ ಹಳಿ ತಪ್ಪಿದೆ. ಸರ್ಕಾರ ಸಚಿವ ಸಂಪುಟದಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು. ಅಲ್ಪಸಂಖ್ಯಾತರನ್ನು ಒಂದೇ ಜಾತಿ ಎಂದು ಪರಿಗಣಿಸಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಆದರೆ ಲಿಂಗಾಯಿತರು ಒಕ್ಕಲಿಗರನ್ನು ವಿಂಗಡಿಸಿ ಸಮಾಜ ಒಡೆಯಲಾಗಿದೆ. ವಿಶ್ವಕರ್ಮರು, ಈಡಿಗರು, ಬಲಿಜಿಗರು ನಾವು 30- 35 ಲಕ್ಷ ಇದ್ದೇವೆ ಎನ್ನುತ್ತಾರೆ. ಆದರೆ ಸರ್ಕಾರ 11-12 ಲಕ್ಷ ಎನ್ನುತ್ತಾರೆ, ನಮ್ಮ ಸಮಾಜದಲ್ಲೂ ಗೊಂದಲ ಉಂಟಾಗಿದೆ ಎನ್ನುತ್ತಾರೆ. ಬಹುದೊಡ್ಡ ಸಂಖ್ಯೆಯಲ್ಲಿರುವ ಪ. ಜಾತಿ ಪ. ಪಂಗಡ ಮುಖಂಡರು ಜಾತಿ ಆಧಾರದಲ್ಲಿ ನಮ್ಮನ್ನು ವಿಭಜನೆ ಮಾಡಿದ್ದಾರೆ ಎನ್ನುತ್ತಾರೆ.
ಅಲ್ಪಸಂಖ್ಯಾತರನ್ನು ಹೆಚ್ಚು ಎಂದು ತೋರಿಸುವ ತಂತ್ರ ನಡೆಯುತ್ತಿದೆ. ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಬಲಿಜ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ ಮುಂತಾದ ಪದಗಳನ್ನು ವರದಿಯಲ್ಲಿ ಬಳಸಲಾಗಿದೆ. ಇದರಿಂದ ಆಯಾ ಸಮುದಾಯಗಳು ನೋವು ವ್ಯಕ್ತಪಡಿಸುವೆ, ಆಯಾ ಸಮುದಾಯದ ಕ್ರಿಶ್ಚಿಯನ್ ಎಂದು ನಮೂದಿಸಲಾಗಿದೆ ಎಂದರು.
ತಮಗೆ ಬಂದಿರುವ ಗಂಡಾಂತರ ತಪ್ಪಿಸಿಕೊಳ್ಳಲು ಜನಗಣತಿಯನ್ನು ಮುನ್ನಲೆಗೆ ತಂದಿದ್ದಾರೆ. ಸಿದ್ದರಾಮಯ್ಯನವರೇ ಇದಕ್ಕಾಗಿ ಹಣ ಬಿಡುಗಡೆ ಮಾಡಿದ್ದು, ಸಿದ್ದರಾಮಯ್ಯನವರೇ ಕಾಂತರಾಜ್ರನ್ನ ನೇಮಕ ಮಾಡಿರುವುದು, ಸರ್ಕಾರದ ಮೇಲೆ ಸಮಸ್ಯೆ ಬರುತ್ತೆ ಎಂದಾಗ ಜಾತಿಗಣತಿ ವಿಚಾರವನ್ನು ಮುಂದೆ ತಂದಿದ್ದಾರೆ. ಸರ್ಕಾರ ತಮ್ಮ ರಕ್ಷಣೆ ಮಾಡಿಕೊಳ್ಳಲು ಈ ರೀತಿ ಮಾಡಿದೆ, ಸರಕಾರ ಇದನ್ನು ಗುರಾಣಿಯಾಗಿ ಇಟ್ಟುಕೊಂಡಿದೆ ಎಂದರು.
ಮತ್ತೊಂದು ಉಪಸಮಿತಿ ಮಾಡಿ ಮತ್ತಷ್ಟು ಕಾಲ ಮುಂದೂಡಬಹುದು. ಸರ್ಕಾರ ಇವತ್ತು ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದು ನೋಡಬೇಕು. ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸುತ್ತಾ, ನಾವು ದುರ್ಬಲರ ಹಿಂದುಳಿದ ವರ್ಗದವರ ಪರವಾಗಿ ನಿಲ್ಲುತ್ತೇವೆ. ಜಯಪ್ರಕಾಶ್ ಹೆಗ್ಡೆ ಹಿರಿಯರು ವ್ಯಕ್ತಿಗತವಾಗಿ ನಾನು ಏನು ಹೇಳುವುದಿಲ್ಲ. ನಮ್ಮ ಸರಕಾರ ವರದಿ ಪರಿಶೀಲನೆ ಮಾಡಲು ಅವರನ್ನು ನೇಮಿಸಿತ್ತು ಎಂದರು.
ವರದಿಯ ಲೋಪದೋಷಗಳಿಗೆ ಸರಕಾರವೇ ಉತ್ತರಿಸಬೇಕು. ಇವತ್ತು ಅಥವಾ ನಾಳೆ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬಹುದು. ಸಮಿತಿ ಮಾಡಿ ಕೈ ತೊಳೆದುಕೊಳ್ಳಬಹುದು, ಆಡಳಿತಾತ್ಮಕ ಗದಾ ಪ್ರಹಾರ ತಪ್ಪಿಸಿಕೊಳ್ಳಲು ಈ ವಿಚಾರ ಪ್ರಸ್ತಾವಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷದೊಳಗಿನ ಒಪ್ಪಂದದ ವಿಚಾರ ಮರೆಮಾಚಲು ಮುನ್ನಡೆಗೆ ಬಂದಿದೆ. ಸರಕಾರ ತನ್ನ ರಕ್ಷಣೆಗೆ ಈ ವಿಚಾರವನ್ನು ಬಳಸಿಕೊಳ್ಳುತ್ತಿದೆ ಎಂದರು.
ನಾವು ಬಿಜೆಪಿ ಮುಖಂಡರು ಸಭೆ ಸೇರಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಾಲೆ ಮಕ್ಕಳಿಂದ ಸರ್ವೇ ಮಾಡಿಸಿದ್ದಾರೆ ಎಂಬ ಆರೋಪ ಇದೆ. ಜನರು ನಮ್ಮ ಮನೆಗೆ ಬಂದಿಲ್ಲ ಎನ್ನುತ್ತಿದ್ದಾರೆ. 162 ಕೋಟಿ ರೂಪಾಯಿ ಖರ್ಚು ಮಾಡಿ, ಯಾರ ಮನೆಗೂ ಹೋಗಿಲ್ವಾ?, ಸಿದ್ದರಾಮಯ್ಯ ಅವಧಿಯಲ್ಲೇ ಸಮೀಕ್ಷೆ ಕಾರ್ಯ ಮುಗೀದಿತ್ತು ಎಂದರು.

