ಉಡುಪಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ ಆರು ಸ್ಪೀಡ್ ರ್ಯಾಡರ್ ಕ್ಯಾಮೆರಾಗಳು ಕಳೆದ ಒಂದು ವಾರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 46,753 ವಾಹನಗಳನ್ನು ಪತ್ತೆ ಹಚ್ಚಿವೆ. ಈ ಸಂಬಂಧ ಇದುವರೆಗೆ 235 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ, ಕಾಪು ಠಾಣಾ ವ್ಯಾಪ್ತಿಯ ದಂಡತೀರ್ಥ, ಕೋಟ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ, ಗಂಗೊಳ್ಳಿ ಠಾಣಾ ವ್ಯಾಪ್ತಿಯ ತ್ರಾಸಿ, ಬೈಂದೂರು ಠಾಣಾ ವ್ಯಾಪ್ತಿಯ ಕೆರ್ಗಾಲ್ ಹಾಗೂ ಪಡುಬಿದ್ರೆ-ಬೆಳ್ಳಣ್ ರಾಜ್ಯ ಹೆದ್ದಾರಿಯ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೂಪದಕಟ್ಟೆ ಪ್ರದೇಶಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಹೊಂದಿರುವ ಅತ್ಯಾಧುನಿಕ ರ್ಯಾಡರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಈ ಕ್ಯಾಮೆರಾಗಳ ಕಾರ್ಯವೈಖರಿ ಹಾಗೂ ನಿಯಂತ್ರಣ ಕೊಠಡಿಯಲ್ಲಿ ಅವುಗಳನ್ನು ಹೇಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂಬ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕಂಟ್ರೋಲ್ ರೂಂ ಎನ್ನೈ ಅಜ್ವಲ್ ಇಬ್ರಾಹಿಂ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಮೇ 21ರಿಂದ ಕಾರ್ಯಾರಂಭಗೊಂಡಿರುವ ಈ ಆರು ಕ್ಯಾಮೆರಾಗಳ ವ್ಯಾಪ್ತಿಯಲ್ಲಿ ಕಳೆದ ಏಳು ದಿನಗಳಲ್ಲಿ 3,99,319 ವಾಹನಗಳು ಸಂಚರಿಸಿದ್ದು, ಅವುಗಳಲ್ಲಿ 46,753 ವಾಹನಗಳು ವಿವಿಧ ಸಂಚಾರ ನಿಯಮ ಉಲ್ಲಂಘಿಸಿರುವುದು ದಾಖಲಾಗಿದೆ.
ಅತೀವೇಗದ ಚಾಲನೆ ಪ್ರಕರಣಗಳೇ ಹೆಚ್ಚಾಗಿದ್ದು, 29,484 ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ವಾಹನಗಳು ಮತ್ತು 2,279 ಘನ ವಾಹನಗಳು ವೇಗ ಮಿತಿ ಮೀರಿಸಿರುವುದು ಕಂಡುಬಂದಿದೆ. ಇದರ ಜೊತೆಗೆ 12,184 ಮಂದಿ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದು, 11,396 ಮಂದಿ ಹೆಲ್ಮಟ್ ಧರಿಸದೇ ಚಾಲನೆ ನಡೆಸಿರುವುದು ವರದಿಯಾಗಿದೆ. ವಿರುದ್ಧ ದಿಕ್ಕಿನಲ್ಲಿ ಚಾಲನೆ ನಡೆಸಿದ 2,677 ಪ್ರಕರಣಗಳು ಹಾಗೂ 2,393 ಟ್ರಿಪಲ್ ರೈಡಿಂಗ್ ಪ್ರಕರಣಗಳೂ ದಾಖಲಾಗಿವೆ.
ಪ್ರದೇಶವಾರು ಅಂಕಿಅಂಶಗಳ ಪ್ರಕಾರ ಪಡುಬಿದ್ರಿಯಲ್ಲಿ ಅತಿ ಹೆಚ್ಚು 13,681 ಪ್ರಕರಣಗಳು ದಾಖಲಾಗಿದ್ದರೆ, ಕಾರ್ಕಳದಲ್ಲಿ 9,696, ಕಾಪುವಿನಲ್ಲಿ 8,005, ಕೋಟದಲ್ಲಿ 7,857, ಬೈಂದೂರಿನಲ್ಲಿ 7,713 ಹಾಗೂ ಗಂಗೊಳ್ಳಿಯಲ್ಲಿ 5,206 ಪ್ರಕರಣಗಳು ಪತ್ತೆಯಾಗಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 80 ಕಿ.ಮೀ. ಹಾಗೂ ರಾಜ್ಯ ಹೆದ್ದಾರಿಯಲ್ಲಿ ಗಂಟೆಗೆ 60 ಕಿ.ಮೀ. ವೇಗ ಮಿತಿ ನಿಗದಿಪಡಿಸಲಾಗಿದೆ. ಪ್ರತಿದಿನ ನೂರಾರು ಪ್ರಕರಣಗಳು ದಾಖಲಾಗುತ್ತಿದ್ದು, ಪರಿಶೀಲನೆಯ ಬಳಿಕ ದಿನಕ್ಕೆ 50ರಿಂದ 100 ಪ್ರಕರಣಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ’ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಅತೀವೇಗದ ಚಾಲನೆಗೆ ದ್ವಿಚಕ್ರ ವಾಹನಗಳಿಗೆ ₹1,000, ಲಘು ಮತ್ತು ಘನ ವಾಹನಗಳಿಗೆ ₹2,000 ದಂಡ ವಿಧಿಸಲಾಗುತ್ತದೆ. ಹೆಲ್ಮಟ್ ಧರಿಸದಿರುವುದು, ಟ್ರಿಪಲ್ ರೈಡಿಂಗ್ ಹಾಗೂ ಸೀಟ್ ಬೆಲ್ಟ್ ಧರಿಸದಿರುವುದಕ್ಕೆ ತಲಾ ₹500 ದಂಡ ವಿಧಿಸಲಾಗುತ್ತದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದರೆ ಲಘು ವಾಹನಗಳಿಗೆ ₹3,000, ಘನ ವಾಹನಗಳಿಗೆ ₹5,000 ಹಾಗೂ ದ್ವಿಚಕ್ರ ವಾಹನಗಳಿಗೆ ₹1,000 ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸುವ ಹೊರರಾಜ್ಯದ ವಾಹನಗಳಿಗೂ ದಂಡ ವಿಧಿಸಲಾಗುತ್ತಿದ್ದು, ದಂಡವನ್ನು ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ಪಾವತಿಸಬಹುದು ಎಂದು ಇಲಾಖೆ ತಿಳಿಸಿದೆ.
ಉಡುಪಿ: 6 ಸ್ಪೀಡ್ ರ್ಯಾಡರ್ ಕ್ಯಾಮೆರಾಗಳ ಕಾರ್ಯಾಚರಣೆ
ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಆರು ಕಡೆಗಳಲ್ಲಿ ಸ್ಥಾಪಿಸಿರುವ ಸ್ಪೀಡ್ ರ್ಯಾಡರ್ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಬಗ್ಗೆ ಕಣ್ಗಾವಲು ಇರಿಸಿದ್ದು, ಕಳೆದ ಒಂದು ವಾರದಲ್ಲಿ ನಿಯಮ ಉಲ್ಲಂಘಿಸಿದ ಒಟ್ಟು 46753 ವಾಹನಗಳನ್ನು ಪತ್ತೆ ಹಚ್ಚಿವೆ. ಈ ಸಂಬಂಧ ಈವರೆಗೆ 235 ಮಂದಿಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲ, ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ದಂಡತೀರ್ಥ, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ, ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ, ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆರ್ಗಾಲ್ ಮತ್ತು ಪಡುಬಿದ್ರೆ -ಬೆಳ್ಮಣ್ ರಾಜ್ಯ ಹೆದ್ದಾರಿಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೂಪದಕಟ್ಟೆಯಲ್ಲಿ ಒಟ್ಟು ಆರು ಅತ್ಯಾಧುನಿಕ ಸ್ಪೀಡ್ ರ್ಯಾಡರ್ಕ್ಯಾ ಮೆರಾ(ಅಟೋಮೆಟಿಕ್ ನಂಬರ್ ಪ್ಲೇಟ್ ರೀಡರ್)ಗಳನ್ನುಅಳವಡಿಸಲಾಗಿದೆ.
ಈ ಕ್ಯಾಮೆರಾಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಯಾವ ರೀತಿಯಾಗಿ ಮಾನಿಟರ್ ಮಾಡಲಾಗುತ್ತದೆ ಎಂಬುದರ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗ ದರ್ಶನದಲ್ಲಿ ಕಂಟ್ರೋಲ್ ರೂಂ ಎಸ್ಸೈ ಅಜ್ಮಲ್ ಇಬ್ರಾಹಿಂ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಅತೀವೇಗದ ಚಾಲನೆ ಅಧಿಕ
ಮೇ 21ರಿಂದ ಕಾರ್ಯಾರಂಭಗೊಂಡ ಈ ಆರು ಕ್ಯಾಮೆರಾಗಳು ಆಳವಡಿಸಿರುವ ಸ್ಥಳದಲ್ಲಿ ಕಳೆದ ಏಳು ದಿನಗಳಲ್ಲಿ ಒಟ್ಟು 3,99,319 ವಾಹನ ಗಳು ಸಂಚರಿಸಿದ್ದು, ಇದರಲ್ಲಿ 46753 ವಾಹನಗಳು ನಿಯಮಗಳನ್ನು ಉಲ್ಲಂಘಿಸಿರು ವುದು ಕಂಡುಬಂದಿದೆ. ಒಟ್ಟು 29484 ದ್ವಿಚಕ್ರ/ತ್ರಿಚಕ್ರ/ಲಘು ವಾಹನಗಳು ಮತ್ತು 2,279 ಘನ ವಾಹನಗಳು ಅತೀವೇಗದ ಚಾಲನೆ, 12184 ಸೀಟ್ ಬೆಲ್ಟ್ ಧರಿಸದಿರುವುದು, 11,396 ಹೆಲ್ಮೆಟ್ ಧರಿಸದೆ ವಾಹನ ಚಾಲನೆ, 2,677 ವಿರುದ್ಧ ದಿಕ್ಕಿನಲ್ಲಿ ಚಾಲನೆ, 2,393 ಟ್ರಿಪಲ್ ರೈಡಿಂಗ್ ಪ್ರಕರಣಗಳು ವರದಿಯಾಗಿವೆ.
ಕಳೆದ ಒಂದು ವಾರದ ಅವಧಿಯಲ್ಲಿ ಬೈಂದೂರುನಲ್ಲಿ ಅಳವಡಿಸಿರುವ ರ್ಯಾಡರ್ ಕ್ಯಾಮೆರಾದಿಂದ 7713, ಗಂಗೊಳ್ಳಿ- 5206, ಕೋಟ- 7857, ಕಾಪು- 8005, ಪಡುಬಿದ್ರೆ- 13681, ಕಾರ್ಕಳ- 9696 ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ ಅತೀ ಹೆಚ್ಚು ಅತೀವೇಗದ ಚಾಲನೆ ಪ್ರಕರಣ ಗಳಿದ್ದರೆ, ಎರಡನೇ ಸ್ಥಾನದಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದು ವರದಿಯಾಗಿದೆ.
‘ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಗಂಟೆಗೆ 80ಕಿ.ಮೀ. ಹಾಗೂ ರಾಜ್ಯ ಹೆದ್ದಾರಿಯಲ್ಲಿ ಗಂಟೆಗೆ 60ಕಿ.ಮೀ. ನಿಗದಿ ಪಡಿಸಲಾಗಿದೆ. ಈ ರ್ಯಾಡರ್ ಕ್ಯಾಮೆರಾಗಳ ಮೂಲಕ ಪ್ರತಿದಿನ ನೂರಾರು ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಿದ್ದು, ಪರಿಶೀಲನೆ ನಡೆಸಿ ದಿನಕ್ಕೆ 50-100 ಪ್ರಕರಣಗಳಿಗೆ ನೋಟೀಸ್ ಜಾರಿ ಮಾಡಲಾಗುತ್ತಿದೆ’ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಅತೀ ವೇಗದ ಚಾಲನೆಗೆ ದ್ವಿಚಕ್ರ ವಾಹನಗಳಿಗೆ 1000ರೂ., ಲಘು ಮತ್ತು ಘನವಾಹನಗಳಿಗೆ 2000ರೂ., ಹೆಲ್ಮೆಟ್ ಧರಿಸದಿದ್ದರೆ 500ರೂ., ಟ್ರಿಪಲ್ ರೈಡರ್ಗೆ 500ರೂ., ಬೆಲ್ಟ್ ಧರಿಸದಿದ್ದರೆ 500ರೂ., ಮೊಬೈಲ್ ಬಳಕೆಗೆ ಲಘು ವಾಹನಗಳಿಗೆ 3000ರೂ., ಘನ ವಾಹನಗಳಿಗೆ 5000ರೂ. ಮತ್ತು ದ್ವಿಚಕ್ರ ವಾಹನಗಳಿಗೆ 1000ರೂ. ದಂಡ ವಿಧಿಸಲಾಗುತ್ತದೆ. ದಂಡವನ್ನು ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲೂ ಪಾವತಿಸಬಹು ದಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ಹೊರರಾಜ್ಯದ ವಾಹನಗಳಿಗೂ ದಂಡ ವಿಧಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

