ಉಡುಪಿ: ಹಿಜಾಬ್ ರಾಜ್ಯ ಸರ್ಕಾರದ ಆದೇಶ ತಂದ ವಿವಾದದ ಕುರಿತು ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಏನಾದರೂ ಹೇಳಲಿ. ಹಿಜಾಬ್ ಮೊದಲಿನಿಂದಲೂ ಮುಸ್ಲಿಂ ಹೆಣ್ಣು ಮಕ್ಕಳು ಧರಿಸುತ್ತಿದ್ದರು. ಹಿಂದುಗಳು ಕೂಡ ಜನಿವಾರ ಹಾಕುತ್ತಾರೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ ಎಂದರು.

ನ್ಯಾಯಾಲಯದಲ್ಲಿ ಯಾವುದೇ ತಡೆಯಜ್ಞೆ ಇಲ್ಲ. ತಡೆ ಆಜ್ಞೆ ಇಲ್ಲದೆ ಇರುವುದರಿಂದ ನ್ಯಾಯಾಲಯದಲ್ಲಿ 10- 20 ವರ್ಷವೂ ಆಗಬಹುದು. ತಡೆಯಾಜ್ಞೆ ಇದ್ದರೆ ಮಾಡಬಾರದು. ದಾವಣಗೆರೆ ಮುಸ್ಲಿಂ ಮುನಿಸಿಗೂ ಈ ಆದೇಶಕ್ಕೂ ಸಂಬಂಧ ಇಲ್ಲ. ದಾವಣಗೆರೆಯಲ್ಲಿ ಮುಸ್ಲಿಮರು ನಮಗೆ ವೋಟ್ ಹಾಕಿದ್ದಾರೆ. ಸ್ವಲ್ಪ ಮತಗಳು ಎಸ್ ಡಿ ಪಿ ಐ ಗೆ ಹೋಗಿದೆ. ಮುಸ್ಲಿಮರು ಈಗಲೂ ನಮಗೆ ಸಾಕಷ್ಟು ಮತ ಹಾಕಿದ್ದಾರೆ ಎಂದರು.

ಯಾವ ಸಮಯಕ್ಕೆ ಏನು ನಿರ್ಧಾರ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದಾರೆ. ಸುಳ್ಳು ಹೇಳುವುದು ಜನರನ್ನು ಎತ್ತಿ ಕಟ್ಟುವುದೇ ಬಿಜೆಪಿಯವರ ಕಾಯಕ. ಹಿಜಾಬ್ ಬಹಳ ಹಿಂದಿನಿಂದ ಹಾಕುತ್ತಿದ್ದಾರೆ. ಜನಿವಾರ ವಿಭೂತಿ ಹಾಕುವ ಸಂಪ್ರದಾಯ ನಮ್ಮಲ್ಲೂ ಇದೆ. ಗಂಡು ಮಕ್ಕಳು ಕೂಡ ಕುಂಕುಮ ಇಟ್ಟುಕೊಳ್ಳುತ್ತಾರೆ. ಯಾವುದಕ್ಕೂ ನಿರ್ಬಂಧ ಇಲ್ಲವಲ್ಲ ಎಂದರು.