ಉಡುಪಿ: ತನ್ನ ಇಷ್ಟದ ಬಂಗುಡೆ ಮೀನು ಹಿಡಿದು ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಕುಣಿದು ಕುಪ್ಪಳಿಸಿದರು. ತೆರೆದ ವಾಹನದಲ್ಲಿ ರಕ್ಷಿತಾ ಶೆಟ್ಟಿ ಭವ್ಯ ಮೆರವಣಿಗೆ ಮೂಲಕ ಸಾಗಿದರು. ರಸ್ತೆಯುದ್ದಕ್ಕೂ ಅಭಿಮಾನಿಗಳು ಜೈಕಾರ ಕೂಗಿದರು.

ತುಳುನಾಡ ಶಾಲು, ಹಾರ ಹಾಕಿ ಪಟಾಕಿ ಸಿಡಿಸಿ ರಕ್ಷಿತಾ ಳನ್ನು ಅಭಿಮಾನಿಗಳು ಬರಮಾಡಿಕೊಂಡರು. ಪಡುಬಿದ್ರಿ ಪೇಟೆ ತನಕ ಮೆರವಣಿಗೆ ಸಾಗಿತು. ಹುಟ್ಟೂರಿನಲ್ಲಿ ರಕ್ಷಿತಾ ಶೆಟ್ಟಿ ಹವಾ ಸೃಷ್ಟಿಸಿದರು.

