ಉಡುಪಿ: ಅಖಿಲ ಭಾರತ ಜೀವ ವಿಮಾ ನೌಕರರ ಸಂಘದ 27ನೇ ದ್ವೈ ವಾರ್ಷಿಕ ಸಮ್ಮೇಳನವು ಇದೇ ಡಿ. 16 ಮತ್ತು 17 ರಂದು ಉಡುಪಿಯಲ್ಲಿ ನಡೆಯಲಿದೆ ಎಂದು ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿತಾ ಉದಯ ಶಂಕರ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ದೇಶದಾದ್ಯಂತ ಎಲ್ ಐಸಿಯ ವಿವಿಧ ಕಚೇರಿಗಳ 150ಕ್ಕೂ ಅಧಿಕ ಪದಾಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ.

ದ್ವೈ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭವು ಡಿ. 15 ರಂದು ಸಂಜೆ 5.30ಕ್ಕೆ ಉಡುಪಿ ಕರಾವಳಿ ಜಂಕ್ಷನ್ ಬಳಿಯ ರಂಜಿತಾ ಪ್ಯಾಲೆಸ್ (ಮಣಿಪಾಲ ಇನ್ )ನಲ್ಲಿ ನಡೆಯಲಿದೆ. ಭಾರತೀಯ ಮಜದೂರ್ ಸಂಘ ( ಬಿಎಂಎಸ್) ದ ವಿಮಾ ವಲಯದ ಉಸ್ತುವಾರಿ ಸೋಮೇಶ್ ಬಿಸ್ವಾಸ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದರು.

ಎಲ್‌ಐಸಿ ಆಡಳಿತ ಮಂಡಳಿ ತನ್ನ ಪಾಲಿಸಿದಾರರಿಗೆ ಉತ್ತಮ ಡಿಜಿಟಲ್ ಸೇವೆಗಳನ್ನು ಒದಗಿಸಬೇಕು. ದರ್ಜೆ 3ರ ನೇಮಕಾತಿ, ದರ್ಜೆ 3( ಗ್ರೇಡ್ ಸಿ) ನೇಮಕಾತಿ ಸಹಿತ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ಬಾಲಕೃಷ್ಣ ಶೆಣೈ, ಮನೋಹನ್ ವೇಗಸ್, ಲಕ್ಷಣ್ ಇದ್ದರು.