ಉಡುಪಿ: ಉಡುಪಿಯ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಏಳು ದಿನಗಳ ಕಾಲ ನಡೆದ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವವು ಭಜನಾ ಮಂಗಳೋತ್ಸವದೊಂದಿಗೆ ಸಂಪನ್ನಗೊಂಡಿತು.

ಧಾರ್ಮಿಕ ಪೂಜಾ ವಿಧಾನಗಳನ್ನು ವಿನಾಯಕ್ ಭಟ್  ನೆರವೇರಿಸಿ, ದೇವರಿಗೆ ಮಹಾಪೂಜೆ ನಡೆಸಿದರು. ಅರ್ಚಕರಾದ ದಯಾಘಾನ್ ಭಟ್, ದೀಪಕ್ ಭಟ್, ಗಿರೀಶ್ ಭಟ್ ಸಹಕರಿಸಿದರು‌.

ನೂರಾರು ಭಕ್ತರೂ ಭಕ್ತಿಯಿಂದ    ಮಂಗಲಾಚರಣೆ, ಮಡೆಸ್ತಾನ ಸೇವೆ ( ಭಕ್ತರಿಂದ ಉರುಳು ಸೇವೆ ), ಮೊಸರು ಕುಡಿಕೆ, ತೆಪ್ಪಂಗಾಯಿ ಸೇವೆಯಲ್ಲಿ ಪಾಲ್ಗೊಂಡರು. ಮಹಾಪೂಜೆ ಬಳಿಕ  ಸಮಾರಾಧನೆ ನಡೆಯಿತು.