ಉಡುಪಿ: ಕಾರ್ಕಳ ತಾಲೂಕು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಅನೇಕ ಕೊಲೆಗಳು ಆಗ್ತಾ ಇತ್ತು. ಕೊಲೆಗಳನ್ನು ನಿಲ್ಲಿಸಲು ವಿಶೇಷ ತಂಡ ರಚನೆ ಮಾಡಿದ್ದೇವೆ. ಕೆಲವು ಅಧಿಕಾರಿಗಳನ್ನು ಕೂಡ ಬದಲಾಯಿಸಿದ್ದೇವೆ ಎಂದರು.
ಮಂಗಳೂರಿನಲ್ಲಿ ಶಾಂತಿ ಸಭೆ ಮಾಡಬೇಕು ಎಂದು ಯೋಚಿಸಿದ್ದೆವು. ಬುಧವಾರ ಮಂಗಳೂರಿನಲ್ಲಿ ಶಾಂತಿ ಸಭೆ ಏರ್ಪಾಟ್ ಆಗಿದೆ. ಪಕ್ಷಾತೀತವಾಗಿ ಈ ಸಭೆ ನಡೆಯಲಿದೆ. ಧರ್ಮಾತೀತ ಜಾತ್ಯಾತೀತ ವಾಗಿ ಈ ಸಭೆ ನಡೆಯಲಿದೆ. ಸಾರ್ವಜನಿಕರು ಧಾರ್ಮಿಕ ಮುಖಂಡರು ಜನಪ್ರತಿನಿಧಿಗಳು ಭಾಗವಹಿಸುತ್ತಾರೆ. ಸಮಾಜಕ್ಕೆ ಶಾಂತಿಯ ಸಂದೇಶ ನೀಡಲು ಈ ಸಭೆ ಆಯೋಜಿಸಿದ್ದೇವೆ ಎಂದರು.

