ಉಡುಪಿ: ರಾಜ್ಯ ಸರ್ಕಾರ ನಾಲ್ಕನೇ ಬಾರಿ ಬಿಯರ್ ದರ ಏರಿಕೆ ಮಾಡುತ್ತಿದೆ. ಐಎಂಎಲ್ ದರವನ್ನು ಎರಡು ಬಾರಿ ಏರಿಕೆ ಮಾಡಿದೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ಅವಕಾಶ ಇಲ್ಲ. ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಆದರೆ ನಮ್ಮ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಅಸಮಾಧಾನ ಹೊರಹಾಕಿದ್ದಾರೆ.

ಮುಖ್ಯಮಂತ್ರಿಗಳು ಮೇ 21ಕ್ಕೆ ಸಭೆ ಕರೆದಿದ್ದಾರೆ. ಮತ್ತೊಮ್ಮೆ ಅವರಲ್ಲಿ ಮನವಿ ಮಾಡುತ್ತೇವೆ. ಸರಕಾರ ಆದಾಯದ ದೃಷ್ಟಿಯಿಂದ ಈ ರೀತಿ ಮಾಡುತ್ತಿದೆ. ಚೀಪರ್ ಮದ್ಯ ಹಾಗೂ ಬಿಯರ್ ನ ಮೇಲೆ ದರ ಏರಿಕೆ ಮಾಡಲಾಗಿದೆ. ಸರ್ಕಾರದ ನೋಟಿಫಿಕೇಶನ್ ಗೆ ನಾವು ಆಕ್ಷೇಪ ಹಾಕಿದ್ದೆವು.

2012ರಿಂದ 6 ಬಾರಿ ಈ ಸ್ಲಾಬ್ ಗಳಿಗೆ ದರ ಏರಿಕೆ ಮಾಡಿದ್ದಾರೆ. ಚೀಪರ್ ಸ್ಲಾಬ್ ಬಳಸುವವರು ಕೂಲಿ ಕಾರ್ಮಿಕರು. ಯಾವ ಸ್ಲಾಬ್ ನಲ್ಲಿ ಸೇಲ್ಸ್ ಜಾಸ್ತಿ ಇದೆಯೋ ಆ ದರವನ್ನೇ ಏರಿಸುತ್ತಿದ್ದಾರೆ. ಇನ್ನು ಅಬಕಾರಿ ಶುಲ್ಕವನ್ನೂ ಜಾಸ್ತಿ ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ, ಇದಕ್ಕೆ ನಮ್ಮ ವಿರೋಧ ಇದೆ ಎಂದು ಅವರು ಹೇಳಿದ್ದಾರೆ.