ಉಡುಪಿ: ಬ್ರಹ್ಮಾವರ ತಾಲೂಕು ಕುಂಜಾಲುವಿನಲ್ಲಿ ಹಸುವಿನ ರುಂಡ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಸ್ಲಿಂ ಮುಖಂಡರು ಎಸ್ ಪಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ ಮುಸ್ಲಿಂ ಮುಖಂಡರು, ಕೋಮಸೌಹಾರ್ದತೆ ಕಾಪಾಡುವಂತೆ ಆಗ್ರಹಿಸಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸರ್ಫುದ್ದೀನ್ , ಜಿಲ್ಲಾ ಮುಸ್ಲಿಂ ಒಕ್ಕೂಟ ಮತ್ತು ಅಲ್ಪಸಂಖ್ಯಾತ ಘಟಕದಿಂದ ಎಸ್ಪಿಯವರಿಗೆ ಮನವಿ ನೀಡಿದ್ದೇವೆ. ಕುಂಜಾಲು ಜಮಾತಿನವರು ಕೂಡ ಇಲ್ಲಿ ಇದ್ದೇವೆ. ದನದ ತ್ಯಾಜ್ಯ ರಸ್ತೆಗೆ ಎಸೆದವರು ಯಾರು ಎನ್ನುವುದು ಗೊತ್ತಿಲ್ಲ. ಯಾರೇ ಈ ಕೃತ್ಯ ಮಾಡಿದ್ದರೂ ಕ್ರಮ ಕೈಗೊಳ್ಳಲು ಎಸ್ಪಿಗೆ ಮನವಿ ಮಾಡಿದ್ದೇವೆ.

ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದೇವೆ. ನಮ್ಮ ಊರು ಸೌಹಾರ್ದದಿಂದ ಕೂಡಿದೆ.ಸೌಹಾರ್ದ ಕೆಡಿಸುವ ಕೆಲಸ ಯಾರೇ ಮಾಡಿದರೂ ಅದು ತಪ್ಪು. ಪೊಲೀಸ್ ಇಲಾಖೆ ಮೇಲೆ ನಮಗೆ ಭರವಸೆ ಇದೆ ಎಂದು ಹೇಳಿದ್ದಾರೆ.

ಸರ್ಫುದ್ದೀನ್ ,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ