ಉಡುಪಿ: ಉಡುಪಿ ಜಿಲ್ಲೆಯ ಕಾಪುವಿನ ಹೊಸ ಮಾರಿಗುಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಿದರು.

ಅವರನ್ನು ದೇಗುಲದ ಆಡಳಿತ ಮಂಡಳಿ ಆತ್ಮೀಯವಾಗಿ ಬರಮಾಡಿಕೊಂಡಿತು. ಬಳಿಕ ಅವರು ಮಾರಿಯಮ್ಮನ ದರ್ಶನ ಪಡೆದರು. ಆ ನಂತರ ಉಚ್ಚಂಗಿ ದೇವಿಯ ದರ್ಶನಗೈದ ವಿಜಯೇಂದ್ರ ಅವರು ಕೆಂಪು ಕಲ್ಲಿನಿಂದ ನಿರ್ಮಾಣಗೊಂಡಿರುವ ದೇಗುಲವನ್ನು ವೀಕ್ಷಿಸಿದರು.