ಉಡುಪಿ: ನಾಲ್ವರು ಮುಸುಕುಧಾರಿಗಳ ತಂಡವೊಂದು ಅಪಾರ್ಟ್ ಮೆಂಟ್ ವೊಂದರಲ್ಲಿ ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದಿದೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಖಕ್ಕೆ ಮುಸುಕು ಧರಿಸಿಕೊಂಡು ಅಪಾರ್ಟ್ ಮೆಂಟ್ ಗೆ ನುಗ್ಗಿದ ನಾಲ್ಕು ಮಂದಿ ದರೋಡೆಕೋರರು, ಕಬ್ಬಿಣದ ಸಲಾಕೆ ಹಿಡಿದು ಪ್ಲ್ಯಾಟ್ ನ ಬಾಗಿಲು ಒಡೆಯಲು ಯತ್ನಿಸಿದ್ದಾರೆ.

ಆದರೆ, ಪ್ಲ್ಯಾಟ್ ನ ಬಾಗಿಲು ಒಡೆಯಲು ಸಾಧ್ಯವಾಗದೆ ಬರೀಗೈಯಲ್ಲಿ ವಾಪಾಸ್ ಬಂದಿದ್ದಾರೆ. ಮುಸುಕುಧಾರಿಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ‌. ಆಗಸ್ಟ್ 1 ರ ಮುಂಜಾನೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದರೋಡೆಕೋರರ ಕೃತ್ಯದಿಂದ ಅಪಾರ್ಟ್ ಮೆಂಟ್ ನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.