ಉಡುಪಿ: ಸಮಾಧಾನ ಮಹೋತ್ಸವದ ವಿರುದ್ಧ ಪ್ರತಿಭಟನೆ ನಡೆಸಿ, ಬಳಿಕ ಮೈದಾನಕ್ಕೆ ತೆರಳಲು ಯತ್ನಿಸಿದ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಶ್ರೀಕಾಂತ್ ಶೆಟ್ಟಿ ಸಹಿತ 38 ಮಂದಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.

ಫೆಲೋಶಿಪ್ ಆಫ್ ಉಡುಪಿ ಡಿಸ್ಟ್ರಿಕ್ ಚರ್ಚಸ್ ವತಿಯಿಂದ ಮಾರ್ಚ್ 20ರಿಂದ 22ರವರೆಗೆ ಉಡುಪಿ ಮಿಷನ್ ಕಂಪೌಂಡ್ ಮೈದಾನದಲ್ಲಿ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮವನ್ನು ನ್ಯಾಯಾಲಯದ ಅನುಮತಿ ಪಡೆದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕ್ರಿಶ್ಚಿಯನ್ ಭಾಷಣಕಾರ ಮೋಹನ್ ಸಿ. ಲಾಜರಸ್ ಅವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದ ವಿರುದ್ಧ ಕೆಲವು ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಆದೇಶದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮಾರ್ಚ್ 20ರಂದು ಸಂಜೆ ಸುಮಾರು 5 ಗಂಟೆಯ ವೇಳೆ ಹಿಂದು ಜಾಗರಣ ವೇದಿಕೆಯ ಶ್ರೀಕಾಂತ್ ಶೆಟ್ಟಿ ನೇತೃತ್ವದಲ್ಲಿ ಸುಮಾರು 38 ಮಂದಿ ಪ್ರತಿಭಟನಾಕಾರರು ಗೋವಿಂದ ಕಲ್ಯಾಣಮಂಟಪದಿಂದ ಸಮಾಧಾನ ಮಹೋತ್ಸವ ನಡೆಯುತ್ತಿದ್ದ ಸ್ಥಳದತ್ತ ಘೋಷಣೆ ಕೂಗುತ್ತಾ ತೆರಳಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದು ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ ಇರುವುದಾಗಿ ತಿಳಿಸಿ, ಮುಂದೆ ಸಾಗದಂತೆ ಎಚ್ಚರಿಕೆ ನೀಡಿದರು.

ಆದರೂ ಪ್ರತಿಭಟನಾಕಾರರು ಮುಂದುವರಿಯಲು ಯತ್ನಿಸಿದ ಕಾರಣ, ಪೊಲೀಸರು ಅವರನ್ನು ವಶಕ್ಕೆ ಪಡೆದು ಬಂಧಿಸಿದರು. ಬಂಧಿತರಲ್ಲಿ ಮಹೇಶ್ ಶೆಣೈ, ಶ್ರೀಕಾಂತ್ ಶೆಟ್ಟಿ, ಸಂತೋಷ್, ಉಮೇಶ್ ನಾಯ್ಕ್, ರಮೇಶ್ ಶೆಟ್ಟಿ, ರಾಜೇಶ್ ಉಚ್ಚಿಲ, ದರ್ಶನ್ ಸೇರಿದಂತೆ ಒಟ್ಟು 38 ಮಂದಿ ಸೇರಿದ್ದಾರೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

View this post on Instagram

A post shared by News Karnataka (@newskarnataka)