ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಪ್ರತಿ ಪರ್ಯಾಯದ ಅಂಗವಾಗಿ ಚತುಷ್ಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಸುಬ್ರಹ್ಮಣ್ಯ ದೇವರ ಸನ್ನಿಧಾನದಲ್ಲಿ ಆಶ್ಲೇಷ ಪೂಜೆಯು ಅತ್ಯಂತ ವೈಭವದಿಂದ ನಡೆಯಿತು.
ಇದರ ಅಂಗವಾಗಿ ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸುಬ್ರಹ್ಮಣ್ಯ ದೇವರಿಗೆ ಕಲಶಾಭಿಷೇಕವನ್ನು ಮಾಡಿ ಮಹಾ ಪೂಜೆಯನ್ನು ಮಾಡಿದರು.

ನಂತರ ಸುಬ್ರಹ್ಮಣ್ಯ ದೇವರ ಎದುರು ಆಶ್ಲೇಷ ಬಲಿಯ ಮಂಡಲವನ್ನು ಬರೆದು ಪುಣ್ಯಾಹ ವಾಚನ, ಮಂಡಲ ಪೂಜೆ, ಬಲಿ ತರ್ಪಣವನ್ನು ನೀಡಿ ಮಹಾ ಪೂಜೆಯನ್ನು ಮಾಡಲಾಯಿತು. ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮತ್ತು ಲಕ್ಷ್ಮೀ ಆಚಾರ್ಯ ದಂಪತಿಗಳು ಆಶ್ಲೇಷ ಬಲಿ ಪೂಜೆಯನ್ನು ಮಾಡಿದರು

