ಉಡುಪಿ: ಇಂದ್ರಾಳಿ ಪರಿಸರದಲ್ಲಿ‌ ಭೀತಿಯ ವಾತಾವರಣ ಸೃಷ್ಟಿಸಿದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು, ಮಣಿಪಾಲ ಪೊಲೀಸರ ಸಹಕಾರದೊಂದಿಗೆ ವಶಕ್ಕೆ ಪಡೆದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುವ ವ್ಯಕ್ತಿ ಮನೋರೋಗಿಯಾಗಿದ್ದು, ಪಶ್ಚಿಮ‌ ಬಂಗಾಳದವನೆಂದು ತಿಳಿದುಬಂದಿದೆ.‌ ವ್ಯಕ್ತಿಯ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಕರೆದೊಯ್ಯಲು ಪಶ್ಚಿಮ ಬಂಗಾಲದಿಂದ ಬರುವುದಾಗಿ ತಿಳಿಸಿದ್ದಾರೆ. ಕಾರ್ಯಾಚರಣೆಗೆ ಸದಾನಂದ ಪೂಜಾರಿ, ವಿವೇಕ್, ವಿಕ್ರಮ್, ವಿಲಾಸ್ ನಾಯಕ್ ಮಂಚಿ ಸಹಕರಿಸಿದರು.