ಉಡುಪಿ: ಬೇರೆ ಬೇರೆ ರಾಜ್ಯಗಳಲ್ಲಿ ಆರ್ ಎಸ್ ಎಸ್ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲಾ ಜಾತಿ ಧರ್ಮದ ಜನ ಇರ್ತಾರೆ. ಕೆಲವು ಕಾರ್ಯ ಚಟುವಟಿಕೆಗಳಿಗೆ ವಿರೋಧ ಬರುವ ಸಾಧ್ಯತೆ ಇದೆ. ಕಾರ್ಯಕ್ರಮ ಮಾಡಲು ಅನುಮತಿ ತೆಗೆದುಕೊಳ್ಳಬೇಕು ಎಲ್ಲರಲ್ಲೂ ಶಿಸ್ತಿರಲಿ ಎಂಬ ಉದ್ದೇಶಕ್ಕೆ ಈ ಆದೇಶ ಮಾಡಲಾಗಿದೆ ಎಂದು ಉಡುಪಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಹೇಳಿಕೆ ನೀಡಿದರು.

ಪರವಾನಿಗೆ ತೆಗೆದುಕೊಂಡು ಯಾವುದೇ ಕಾರ್ಯಚಟುವಟಿಕೆ ಮಾಡಲು ಸಮಸ್ಯೆಗಳಿಲ್ಲ, ಸ್ವೇಚ್ಛಾಚಾರದ ನಡುವಳಿಕೆಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದೆ. ಆರ್ ಎಸ್ ಎಸ್ ಗೆ ಮಾತ್ರ ಅಲ್ಲ ಎಲ್ಲಾ ಸಂಘ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಶಿಸ್ತನ್ನು ತರುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ ಎಂದರು.

ಇನ್ಫೋಸಿಸ್ ಸಂಸ್ಥೆಯ ಬಗ್ಗೆ ನಮಗೆ ಬಹಳ ಗೌರವವಿದೆ. ರಾಜ್ಯ ದೇಶ ಮತ್ತು ಪ್ರಪಂಚದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್‌ ಫೋಸಿಸ್ ಸಾಧನೆ ಮಾಡಿದೆ. ಇದು ಶೈಕ್ಷಣಿಕ ಆರ್ಥಿಕ ಸಾಮಾಜಿಕ ಸಮೀಕ್ಷೆ, ಎಲ್ಲರೂ ತಮ್ಮ ಜಾತಿ ಧರ್ಮದ ಹೆಸರು ಹೇಳಲೇಬೇಕಾಗುತ್ತದೆ. ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರಲ್ಲಿ ನಮ್ಮ ವಿನಂತಿ ಇದೆ ಎಂದರು.

ಕಾಂಗ್ರೆಸ್ ಸರ್ಕಾರ ಇದನ್ನ ಮಾಡುತ್ತಿದೆ ಎಂದು ನಿಮ್ಮ ವಿರೋಧವೇ?, ಮುಂದಿನ ವರ್ಷ ಕೇಂದ್ರ ಸರ್ಕಾರ ನೇರವಾಗಿ ಜಾತಿ ಗಣತಿ ಮಾಡುತ್ತಿದೆ. ಆಗಲು ವಿರೋಧ ವ್ಯಕ್ತಪಡಿಸುತ್ತೀರಾ, ಬಹಳಷ್ಟು ಜನ ನಿಮ್ಮ ಕಡೆ ನೋಡುತ್ತಿದ್ದಾರೆ . ನಿಮ್ಮ ಸೂಚನೆ, ಅನುಭವಗಳು ಏನು ಅಂತ ಯುವ ಸಮೂಹ ನಿಮ್ಮ ಕಡೆ ನೋಡುತ್ತಿದೆ. ಈ ವಿಚಾರದಲ್ಲಿ ಬಹಳ ಯೋಚನೆ ಮಾಡಿ ಹೇಳಿಕೆ ಕೊಟ್ಟಿದ್ದರೆ ಚೆನ್ನಾಗಿತ್ತು ಎಂದರು.