ಉಡುಪಿ: ಕೇವಲ ಮೀನು ಕದ್ದ ಆರೋಪ ಕಾರಣಕ್ಕೆ ಮಹಿಳೆಯನ್ನ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಕೃಷ್ಣನಗರಿ ಉಡುಪಿ ತಾಲೂಕಿ ಮಲ್ಪೆಯಲ್ಲಿ ಈ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮೀನು ಕದ್ದ ಆರೋಪ ಮೇರೆಗೆ ಮಹಿಳೆಯನ್ನ ಮರಕ್ಕೆ ಕಟ್ಟಿ ಹಾಕಿ ಜನ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಉಡುಪಿಯ ಮಲ್ಪೆ ಮೀನುಗಾರಿಕ ಬಂದರಿನಲ್ಲಿ ಈನ ಅಮಾನವೀಯ ಘಟನೆ ನಡೆದಿದೆ. ಕೇವಲ ಮೀನು ಕದ್ದ ಆರೋಪದ ಹಿನ್ನಲೆ ಥಳಿಸಿದ್ದಾರೆ.

ಮಹಿಳೆಯ ಕಪಾಳಕ್ಕೆ ಬಾರಿಸಿ ಅಮಾನವೀಯ ವರ್ತನೆ ನಡೆಸಿದ್ದಾರೆ. ಬಳಿಕ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ. ಘಟನೆ ವೇಳೆ ನೂರಾರು ಸಂಖ್ಯೆ ಯಲ್ಲಿ ಜನ ಸೇರಿದ್ದಾರೆ. ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.