ಉಡುಪಿ: ಮಲ್ಪೆ ಬೀಚ್ ಬಳಿ ಹೋಟೆಲ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಹೋಟೆಲ್ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಚಿನ್ ಮಾಲಕತ್ವದ ಅಮ್ಮ ಹೋಟೆಲ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಸುಮಾರು 15 ಲಕ್ಷ ರೂಪಾಯಿ ವೆಚ್ಚದ ವಸ್ತುಗಳು ಸುಟ್ಟು ಕರಕಲಾಗಿದೆ. ಐದಾರು ಫ್ರಿಡ್ಜ್, ಗ್ರೈಂಡರ್, ಪಾತ್ರೆ, ದಿನಸಿ ಬೆಂಕಿಗಾಹುತಿಯಾಗಿದೆ.
ಹೋಟೆಲ್ ಬಂದ್ ಮಾಡಿ ಹೋದ ನಂತರ ಫ್ರಿಜ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದಿಂದ ಬೆಂಕಿ ಹರಡದಂತೆ ಮುಂಜಾಗ್ರತಾ ಕಾರ್ಯ ಮಾಡಲಾಗಿದೆ.

