ಉಡುಪಿ: ಮಲ್ಪೆ ಬಂದರಿನ ದಕ್ಕೆಯ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಡೆದಿದೆ.

ಮೃತ ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಿಲ್ಲ. ಮಲ್ಪೆ ಪೊಲೀಸ್ ಠಾಣೆಯ ನಾಗರಾಜ್, ಮಲ್ಲಿಕಾ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಮೃತದೇಹ ಮೇಲೆತ್ತುವ ಕಾರ್ಯಾಚರಣೆ ನಡೆಯಿತು.

ಹರೀಶ್ ಪೂಜಾರಿ, ಭುವನೇಶ್ ಶಿರಿಯಾನ್ ಸಹಕರಿಸಿದರು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದೆ. ವಾರಸುದಾರರು ಮಲ್ಪೆ ಪೊಲೀಸ್ ಠಾಣೆಯ‌ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

https://www.instagram.com/reel/DVkr62ICc8H/?utm_source=ig_web_copy_link&igsh=MzRlODBiNWFlZA==