ಉಡುಪಿ: ಭಗವಂತನ ಅನುಗ್ರಹದಿಂದ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ಪೇಜಾವರ ಮಠದ ಅಧೀನದ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಸಂತೋತ್ಸವ ಕಾರ್ಯಕ್ರಮದಲ್ಲಿ ಪಟ್ಟದ ದೇವರ ಪೂಜೆ ನೆರವೇರಿಸಿ ನೂರಾರು ಭಕ್ತರಿಗೆ ವಸಂತೋತ್ಸವ ಸಂದೇಶ ನೀಡಿದರು.

ಋತುಗಳಲ್ಲಿ ತಾನು ವಸಂತ ಎಂದು ಸ್ವಯಂ ಕೃಷ್ಣನೇ ಸಾರಿದ್ದಾನೆ. ಸಮೃದ್ಧಿ ತುಂಬಿರುವ ಈ ಹೊತ್ತಲ್ಲಿ ಪ್ರಕೃತಿಯಿಂದ ನಾವು ಪಡೆಯುವ ಹಣ್ಣು ಹಂಪಲುಗಳನ್ನು ದೇವರಿಗೆ ಅರ್ಪಿಸಿ ಸ್ವೀಕರಿಸುವುದೇ ವಸಂತೋತ್ಸವದ ಸಾರವಾಗಿದೆ ಎಂದರು. ಮಠದ ಅಧಿಕಾರಿಗಳು ಅನೇಕ ವಿದ್ವಾಂಸರು, ವಿವಿಧ ಕ್ಷೇತ್ರಗಳ ಗಣ್ಯರು ನೂರಾರು ಭಕ್ತರು ಭಾಗವಹಿಸಿದ್ದರು.

