ಉಡುಪಿ: ಉಡುಪಿಯಲ್ಲಿ ಬೃಹತ್ ಗೀತೋತ್ಸವ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎಂದು ಉಡುಪಿಯಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದರು.
ನವೆಂಬರ್ 30ಕ್ಕೆ ಕೃಷ್ಣ ಮಠದಲ್ಲಿ ಸಂತ ಸಂಗಮ ನಡೆಯಲಿದ್ದು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11ಗಂಟೆಗೆ ಕೃಷ್ಣಮಠಕ್ಕೆ ನಮೋ ಆಗಮಿಸಲಿದ್ದಾರೆ.
ಸುವರ್ಣ ತೀರ್ಥ ಮಂಟಪವನ್ನು ಪಿಎಂ ಉದ್ಘಾಟಿಸಲಿದ್ದಾರೆ. ಕನಕನ ಕಿಂಡಿಗೆ ಸುವರ್ಣ ಕವಚವನ್ನು ನಮೋ ಉದ್ಘಾಟನೆ ಮಾಡಲಿದ್ದಾರೆ. ಗೀತಾಮಂದಿರ ಭೇಟಿ- ಮಠದಲ್ಲೇ ಪ್ರಸಾದ ಸ್ವೀಕರಿಸಲಿದ್ದಾರೆ. ವಿಶಾಲ ಗದ್ದೆಯಲ್ಲಿ ಲಕ್ಷ ಕಂಠ ಗೀತಾ ಗಾಯನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸುಮಾರು ಹತ್ತು ಶ್ಲೋಕ ಪಠಣ ಮಾಡುತ್ತಾರೆ. ಮೋದಿ ವಿಶ್ವದಾದ್ಯಂತ ಭಗವದ್ಗೀತೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ವಿಶ್ವ ನಾಯಕ ವಿಶ್ವಗೀತಾ ಪರ್ಯಾಯಕ್ಕೆ ಬರುತ್ತಿರುವುದು ಬಹಳ ಸಂತೋಷವಾಗಿದ್ದು, ದ.ಕ, ಚಿಕ್ಕಮಗಳೂರು, ಉ.ಕ, ಹಾಸನ, ಶಿವಮೊಗ್ಗದಿಂದ ಜನ ಬರಲಿದ್ದಾರೆ.

