ಉಡುಪಿ: ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಮಂದಹಾಸ ಮೂಡಿದ್ದು, ನಗರ ಠಾಣೆ ಪೊಲೀಸರಿಂದ 8 ಲಕ್ಷದ 83 ಸಾವಿರದ 400 ರೂ. ಮೌಲ್ಯದ 60 ಮೊಬೈಲ್ ಹಸ್ತಾಂತರ ಮಾಡಲಾಗಿದೆ.

ಮೊಬೈಲ್ ಕಳೆದುಕೊಂಡಿದ್ದವರಿಂದ ಸಿಎಐಆರ್ ಪೋರ್ಟಲ್ ನಲ್ಲಿ ದೂರು ದಾಖಲಾಗಿತ್ತು. ಸಿಎಐಆರ್ ನಲ್ಲಿ ದಾಖಲಾಗಿದ್ದ ದೂರು ನಗರ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿತ್ತು.

ಮೂರು ತಿಂಗಳಲ್ಲಿ 60 ಮಂದಿಯ ಮೊಬೈಲ್ ಟ್ರೇಸ್ ಮಾಡಿ, ಮೊಬೈಲ್ ವಶಕ್ಕೆ ಪಡೆದು ಸೂಕ್ತ ದಾಖಲೆ ಮೇಲೆ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ. ಕಷ್ಟಪಟ್ಟು ಇಎಮ್ ಐ ಮೂಲಕ ಮೊಬೈಲ್ ಖರೀದಿಸಿದ್ದವರ ಮುಖದಲ್ಲಿ ಮಂದಹಾಸ ಮೂಡಿದೆ. ಮೂರು ತಿಂಗಳ ಬಳಿಕ ಮೊಬೈಕ್ ಕಂಡು ಪೊಲೀಸರಿಗೆ ವಾರಸುದಾರರು ಧನ್ಯವಾದ ತಿಳಿಸಿದರು.

ಮೊಬೈಲ್ ಕಳೆದುಕೊಂಡರೆ ಗಾಬರಿಯಾಗದೆ ಸಿಎಐಆರ್ ಪೋರ್ಟಲ್ ನಲ್ಲಿ ದೂರು ದಾಖಲಿಸಿ. ಈ ವರ್ಷ ಸಿಎಐಆರ್ ಪೋರ್ಟಲ್ ನಲ್ಲಿ ಮೊಬೈಲ್ ಕಳವು ದೂರು ಹೆಚ್ಚಾಗಿದೆ ಎಂದು ಸಾರ್ವಜನಿಕರಿಗೆ ಡಿವೈಎಸ್ಪಿ ಡಿ.ಟಿ ಪ್ರಭು ಸಲಹೆ ನೀಡಿದ್ದಾರೆ.