ಉಡುಪಿ: ಸೀಕೋ ಮತ್ತು ಯು.ಬಿ.ಫೂಟ್ಸ್ ಆಶ್ರಯದಲ್ಲಿ ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ 5 ದಿನಗಳ ಮಾವು ಮೇಳಕ್ಕೆ ಚಾಲನೆ ನೀಡಲಾಯಿತು.

ಮೇ 18ರ ವರೆಗೆ ನಡೆಯುವ ಮಾವು ಮೇಳದಲ್ಲಿ ವಿವಿಧ ಮಾವು ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯವಾಗಿ ಬೆಳೆಯುವ ಮಾವಿನ ತಳಿಗಳಾದ ಬನೆಡ್, ಅಪುಸ್, ಮುಂಡಪ್ಪ, ಕದ್ರಿ, ಪೈರಿ, ಕಳಕ್ಟರ್‌, ಕಾಲಪ್ಪಾಡಿ ಲಭ್ಯವಿದೆ.

ರಾಜ್ಯದ ವಿವಿಧ ಸ್ಥಳಗಳಲ್ಲಿ ಬೆಳೆಯುವ ತಳಿಗಳಾದ ಮಲ್ಲಿಕ, ಮಲಗೋವಾ, ನೀಲಂ, ಸಿಂಧೂರ, ಬಂಗನಪಲ್ಟಿ, ಕೇಸರಿ, ದಶಹರಿ ಮತ್ತು ಶುಗ‌ರ್ ಬೇಬಿ ಸಹಿತ ಹಲವು ರುಚಿಕರ ಮತ್ತು ಜನರು ಅತೀ ಹೆಚ್ಚು ಇಷ್ಟ ಪಡುವ ಆರೋಗ್ಯಕರ ಮಾವುಗಳು ಈ ಮೇಳದಲ್ಲಿ ಸಾರ್ವಜನಿಕರಿಗೆ ಖರೀದಿಸಲು ಲಭ್ಯ ಇವೆ ಎಂದು ಸಂಘಟಕರು ತಿಳಿಸಿದ್ದಾರೆ.