ತುಮಕೂರು: ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶಿವಕುಮಾರ್ ಶ್ರೀಗಳ 118ನೇ ಜನ್ಮ ದಿನ ಹಿನ್ನೆಲೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ ಕಣ್ಮನ ಸೆಳೆಯುತ್ತಿದೆ. ತುಮಕೂರಿನ ಕ್ಯಾತಸಂದ್ರದ ಬಳಿಯ ಸಿದ್ದಗಂಗಾ ಮಠದ ಆವರಣದಲ್ಲಿ ರಂಗೋಲಿ ಚಿತ್ರ ಚಿತ್ರಿಸಲಾಗಿದೆ.
ಶ್ರೀ ಶಿವಕುಮಾರ ಸ್ವಾಮೀಜಿ ಭಾವ ಚಿತ್ರಕ್ಕೆ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು. ಒಟ್ಟು 125 ಅಡಿ ಉದ್ದ, 65 ಅಡಿ ಅಗಲ ಸೇರಿ 8125 ಚದರ ಅಡಿ ವಿಸ್ತೀರ್ಣ ಹೊಂದಿದೆ. ಮೈಸೂರಿನ ಪುನೀತ್ ಕಲಾವಿದ ಸೇರಿ 5 ಜನರ ತಂಡದಿಂದ ರಂಗೋಲಿ ಬಿಡಿಸಲಾಗಿದೆ.
ರಂಗೋಲಿ ಒಟ್ಟು 8125 ಅಡಿ ವಿಸ್ತರ್ಣದಲ್ಲಿ ಬೃಹತ್ ಗಾತ್ರ ಹೊಂದಿದ್ದು, ಶ್ರೀಗಳ ಭಾವ ಚಿತ್ರದ ರಂಗೋಲಿಗಾಗಿ 12 ಗಂಟೆಗಳ ಶ್ರಮ ವಹಿಸಿದ್ದಾರೆ. ಸುಮಾರು 40 ಮೂಟೆ ರಂಗೋಲಿ ಯಲ್ಲಿ ರಂಗೋಲಿ ಚಿತ್ರ ಮೂಡಿಬಂದಿದೆ. ರಂಗೋಲಿ ಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಭಾವ ಚಿತ್ರ ಮೂಡಿಬಂದಿದೆ.

