ತುಮಕೂರು: ರಾಜ್ಯದಲ್ಲಿ ಡೆಂಗ್ಯೂ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತುಮಕೂರಿನಲ್ಲಿ ಸಚಿವ ಪರಮೇಶ್ವರ್ ಸಭೆ ನಡೆಸಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ಡೆಂಗ್ಯೂ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ಮಹಾನಗರ ಪಾಲಿಕೆ ಕಮಿಷನರ್ ಬಿ.ವಿ ಅಶ್ವಿಜಾ ಅವರು ಫೀಲ್ಡ್ ಗೆ ಇಳಿದಿದ್ದಾರೆ. ತಾನೇ ಮುಂದೆ ನಿಂತುಕೊಂಡು ಬೀದಿ ಬೀದಿಗಳಲ್ಲಿ ಫಾಗಿಂಗ್ ನ್ನು ಮಹಾನಗರ ಪಾಲಿಕೆ ಕಮಿಷನರ್ ಮಾಡಿಸುತ್ತಿದ್ದಾರೆ.
ಇನ್ಮುಂದೆ ತುಮಕೂರು ನಗರ ವ್ಯಾಪ್ತಿಯಲ್ಲಿ ಪ್ರತಿನಿತ್ಯವೂ ಫಾಗಿಂಗ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಡೆಂಗ್ಯೂ ಬಗ್ಗೆ ಮಹಾನಗರ ಪಾಲಿಕೆ ಕಮಿಷನರ್ ಅರಿವು ಮೂಡಿಸಿದ್ದಾರೆ. ಮನೆ ಹಾಗೂ ಅಕ್ಕಪಕ್ಕದ ಖಾಲಿ ನಿವೇಶನಗಳ ಬಳಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಜನರಿಗೆ ಮಾಹಿತಿ ನೀಡಿದ್ದಾರೆ.

