ತುಮಕೂರು: ಕಾಲು ದಾರಿ ವಿಚಾರವಾಗಿ ಗುಬ್ಬಿ ಟೌನ್ ಕ್ಲಬ್ ಕೃಷ್ಣಮೂರ್ತಿ ಕುಟುಂಬದಿಂದ ಸಹೋದರನ ಮನೆಯನ್ನೇ ಧ್ವಂಸ ಮಾಡಿದ ಘಟನೆ ಗುಬ್ಬಿ ಪಟ್ಟಣದ ವಿದ್ಯಾ ನಗರದಲ್ಲಿ ತಡ ರಾತ್ರಿ ನಡೆದಿದೆ.

ಕಾಲು ದಾರಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿತ್ತು ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬಂತೆ ಸ್ವಂತ ಸಹೋದರನ ಮನೆ ಮೇಲೆ ಟ್ರಾಕ್ಟರ್ ನುಗ್ಗಿಸಿ ದಾಂಧಲೆ ಮಾಡಲಾಗಿದೆ.

ಟ್ರಾಕ್ಟರ್ನಿಂದ ಗುದ್ದಿದ ಪರಿಣಾಮ ವೆಂಕಟರಾಮು ಮನೆಯ ಶೆಡ್ ಧ್ವಂಸ, ಎರಡು ಬೈಕ್ಗಳು ಜಖಂ ವಾಗಿವೆ, ಕೃಷ್ಣಮೂರ್ತಿ ರಾಜಕೀಯ ಪ್ರಭಾವ ಹಿನ್ನೆಲೆ ಸಹೋದರ ವೆಂಕಟರಾಮು ಕುಟುಂಬದವರು ದೂರು ನೀಡಿದರೂ ಪೊಲೀಸರು ತಲೆ ಕೆಡಿಸಿಕೊಳ್ಳುತ್ತಿಲ್ಲ , ಇದಕ್ಕೆ ಗುಬ್ಬಿ ಪೊಲೀಸರ ನಿರ್ಲಕ್ಷಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.