ವೈರಲ್: ಇಲ್ಲೊಬ್ಬ ಯುವತಿ ತಾನು ತೆಳ್ಳಗೆ ಕಾಣಬೇಕೆಂದು ಕಠಿಣ ಆಹಾರ ಪಥ್ಯ ಮಾಡಿ ಜೀವಂತ ಅಸ್ತಿಪಂಜರವಾಗಿದ್ದಾಳೆ. ಈಕೆಯ ಮೈಯಲ್ಲಿ ಹುಡುಕಿದರೂ ಪಾವ್ ಕೆಜಿ ( 250 grams) ಮಾಂಸವಿಲ್ಲ.
ಈಕೆ ಇನ್ನೂ ಹರೆಯದ ವಯಸ್ಸಿನ ಯುವತಿ. ಮದುವೆ ಮಕ್ಕಳು ಏನೂ ಇಲ್ಲ. ಈಕೆ ವಾಸವಿರುವುದು ಚೀನಾದ ಗ್ವಾಂಗ್‌ಡಾಂಗ್ ಪ್ರಾಂತ್ಯದ ಗುವಾಂಗ್‌ಝೌ ಎಂಬಲ್ಲಿ. ಈಕೆಯ ಹೆಸರು ಬೇಬಿ ಟಿಂಗ್ಜಿ. ಈಕೆ ಚೀನಾದ ಮಹಿಳೆಯರು ಇರುವಂತೆಯೇ ಸರಾಸರಿ 160 ಸೆಂ.ಮೀ ಎತ್ತರವಿದ್ದಾಳೆ.
ಆದರೆ, ಈಕೆ ತೂಕ ಮಾತ್ರ ಕೇವಲ 25 ಕೆ.ಜಿ. ತೂಕವಿದ್ದಾಳೆ. ಆದರೆ, ಈ ತೂಕದಲ್ಲಿಯೂ ಮತ್ತಷ್ಟು ಕಡಿಮೆ ಮಾಡಿಕೊಳ್ಳುವ ಇಂಗಿತನವನ್ನು ಹೊಂದಿದ್ದು, ಅದಕ್ಕಾಗಿ ತಾನೇನು ಮಾಡಬೇಕು ಹೇಳಿ ಸ್ನೇಹಿತರೇ ಎಂದು ಸಾಮಾಜಿಕ ಜಾಲತಾಣದಲ್ಲಿ ಸಲಹೆಗಳನ್ನು ಕೇಳಿದ್ದಾಳೆ.
ಭಾರತದಲ್ಲಿ ಬ್ಯಾನ್ ಆಗಿರುವ ಟಿಕ್‌ಟಾಕ್ ಸಾಮಾಜಿಕ ಜಾಲತಾಣದ ಚೀನಾದ ಆವೃತ್ತಿಯಾದ ಡೌಯಿನ್‌ನಲ್ಲಿ ಬೇಬಿ ಟಿಂಗ್ಜಿ ಬರೋಬ್ಬರಿ 42,000ಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಅವರಲ್ಲಿ ಹೆಚ್ಚಿನವರು ಟಿಂಗ್ಜಿಯ ಆರೋಗ್ಯದ ಬಗ್ಗೆ ನಿರಂತರವಾಗಿ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ಬೇಬಿ ಟಿಂಗ್ಜಿ ಅವರ ಕಾಳಜಿಯ ಸಲಹೆಗಳನ್ನು ದೂರವಿಟ್ಟು, ನಾನು ಇನ್ನೂ ತೆಳಗಾಗಬೇಕು ಅದಕ್ಕೇನಾದರೂ ಸಲಹೆಗಳನ್ನು ನೀಡಿ ಎಂದು ಕೇಳಿಕೊಂಡಿದ್ದಾಳೆ.

