ಬೀಜಿಂಗ್ : ಇತ್ತೀಚೆಗೆ ರೀಲ್ಸ್, ವಿಡಿಯೋ ಮೂಲಕವೇ ಹಲವರು ಆದಾಯಗಳಿಸುತ್ತಿದ್ದಾರೆ. ಇನ್ನು ಲೈಕ್ ಮತ್ತು ಕಮೆಂಟ್‌ಗಳಿಗಾಗಿ ಹರಸಾಹಸ ಮಾಡಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಯುವತಿಯೊಬ್ಬರು ಲೈವ್ ಸ್ಟ್ರೀಮ್‌ನಲ್ಲಿ ವಿವಿದ ಭಗೆಯ ಆಹಾರ ಸೇವಿಸುವ ಸಾಹಸ ಮಾಡಿ ಮೃತಪಟ್ಟಿದ್ದಾಳೆ. ಈಕೆ ಲೈವ್ ಸ್ಟ್ರೀಮ್ ಮೂಲಕ ಬರೋಬ್ಬರಿ 10 ಗಂಟೆ ವಿವಿಧ ಬಗೆಯ ಖ್ಯಾದ್ಯಗಳನ್ನು ಸೇವಿಸಿದ್ದಾಳೆ. ಇದರ ಪರಿಣಾಮ ಆಹಾರ ಜೀರ್ಣಿಸದೆ ಯುವತಿ ಮೃತಪಟ್ಟ ಘಟನೆ ಚೀನಾದಲ್ಲಿ ನಡೆದಿದೆ.
ಈಗಾಗಲೇ ಪ್ಯಾನ್ ಕ್ಸಿಯೋಟಿಂಗ್‌ಗೆ ಟಿವಿ ನೋಡುವುದು, ಆಹಾರ ಸೇವಿಸುವುದು ಚಟವಾಗಿದೆ. ಇದನ್ನು ಲೈವ್ ಸ್ಟ್ರೀಮ್ ಮೂಲಕ ತೋರಿಸಿದ್ದಾಳೆ.ಆದರೆ ಈ ಬಾರಿ ಬರೋಬ್ಬರಿ 10 ಗಂಟೆ ಆಹಾರ ಸೇವಿಸಿದ ಪರಿಣಾಮ ಜೀರ್ಣಿಸದೆ ಯುವತಿ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಈಕೆಯ ಹೊಟ್ಟೆಯಲ್ಲಿ ಕರಗದೇ ಉಳಿದ ಹಲವು ಆಹಾರಗಳಿತ್ತು. ಇಷ್ಟೇ ಅಲ್ಲ ಈ ಆಹಾರವೇ ಈಕೆಯ ಜೀವಕ್ಕೆ ಕುತ್ತು ತಂದಿದೆ ಅನ್ನೋ ವರದಿ ಬಹಿರಂಗವಾಗಿದೆ.

