ಬೆಂಗಳೂರು : ಸಿಗ್ನಲ್ ಜಂಪ್, ಅತೀ ವೇಗವಾಗಿ ಬೈಕ್ ಚಲಾಯಿಸಿದನ್ನು ಪ್ರಶ್ನಿಸಿದ ಯುವತಿಯೋರ್ವಳನ್ನು ಬೈಕ್ ಟ್ಯಾಕ್ಸಿ ಸವಾರ ಮನಬಂದಂತೆ ಪಬ್ಲಿಕ್ನಲ್ಲೇ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಜೂ.14ರಂದು ಜಯನಗರದ ಸಮೀಪದಲ್ಲಿ ನಡೆದ ಈ ಘಟನೆ ನಡೆದಿದೆ. ಬಿಟಿಎಂ ಲೇಔಟ್ನಿಂದ ಜಯನಗರ 3ನೇ ಬ್ಲಾಕ್ಗೆ ಯುವತಿಯು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿಕೊಂಡಿದ್ದಳು ಎಂದು ತಿಳಿದುಬಂದಿದೆ.
ಯುವತಿಯನ್ನು ಪಿಕಪ್ ಮಾಡಿದ ಬೈಕ್ ಟ್ಯಾಕ್ಸಿ ಸವಾರ ಸುಹಾಸ್ ಎಂಬುವವನು ಸಿಗ್ನಲ್ ಜಂಪ್, ಸ್ಪೀಡ್ ಆಗಿ ಬೈಕ್ ಚಾಲನೆ ಮಾಡಿದ್ದಾನೆ. ಇದನ್ನು ಪ್ರಶ್ನಿಸಿ ಬೈಕ್ ನಿಲ್ಲಿಸಲು ಸೂಚಿಸಿದ ಯುವತಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಬೈಕ್ ಸವಾರ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

