ಉತ್ತರ ಪ್ರದೇಶ:  ಈಗಿನ ಜನರ ಯೋಚನೆಗಳೇ ವಿಚಿತ್ರ. ಊಹಿಸಲು ಆಗದ ನಿರ್ಧಾರಗಳನ್ನು ತೆಗೆದುಕೊಳ್ಳುವರು. ಇದೀಗ ಯುವ ಯೂಟ್ಯೂಬರ್ ಓರ್ವ ತಾನು ಸೋಶಿಯಲ್‌ ಮೀಡಿಯಾದಲ್ಲಿ ಇನ್ನು ಹೆಚ್ಚು ಫೇಮಸ್‌ ಆಗಬೇಕೆಂದು ಟವರ್‌ ಏರಿ ಕುಳಿತಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ʼನೀಲೇಶ್ವರ್ 22‌ʼ ಎನ್ನುವ ಯೂಟ್ಯೂಬ್‌ ಚಾನೆಲ್‌ ಹೊಂದಿರುವ ನೀಲೇಶ್ವರ್ ಯೂಟ್ಯೂಬ್‌ ನಲ್ಲಿ ತನ್ನ ವಿಡಿಯೋಗೆ ಹೆಚ್ಚಿನ ವೀಕ್ಷಣೆ ಬರಬೇಕೆನ್ನುವ ಕಾರಣದಿಂದ ಅಪಾಯಕಾರಿ ಸಾಹಸವನ್ನು ಮಾಡಲು ಮುಂದಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಎತ್ತರದ ಟವರ್‌ ಏರುತ್ತ ಹೋದಂತೆ ಸ್ನೇಹಿತನಿಗೆ ಲೈವ್‌ ಆಗಿ ವಿಡಿಯೋ ಮಾಡಲು ಹೇಳಿದ್ದಾನೆ. ನಂತರ ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಯುವಕನಿಗೆ ಕೆಳಗೆ ಇಳಿಯುವಂತೆ ತಿಳಿಸಿದ್ದಾರೆ ಆದರೆ ಆತ ಬರಲು ಒಪ್ಪಲಿಲ್ಲ. ಪೊಲೀಸರು ಸತತ 5 ಗಂಟೆಗಳ ಯುವಕನ ಮನವೊಲಿಸಿದ ಬಳಿಕ ಆತನನ್ನು ಸುರಕ್ಷಿತವಾಗಿ ಟವರ್‌ ನಿಂದ ಕೆಳಗಿಳಿಸಿದ್ದಾರೆ.