ಇಂಡೋನೇಷ್ಯಾದ ಯುವಕನೊಬ್ಬನ ವಿಶಿಷ್ಟ ವಿವಾಹವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಸಲಿಗೆ, ಈ ಯುವಕ ಹುಡುಗಿಯನ್ನು ಮದುವೆಯಾಗಿಲ್ಲ ಆದರೆ ಕುಕ್ಕರ್ ಅನ್ನು ಮದುವೆಯಾಗಿದ್ದಾನೆ.ಈ ಯುವಕನ ಮದುವೆಯ ಫೋಟೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮಧುಮಗ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಕುಕ್ಕರ್​ನ ಮೇಲ್ಭಾಗಕ್ಕೆ ಹುಡುಗಿಯಂತೆ ಶಾಲು ಹೊಂದಿಸಿ,ಮುತ್ತಿಡುತ್ತಿರುವುದು ಫೋಟೋದಲ್ಲಿ ಸೆರೆಯಾಗಿದೆ.

ಕುಕ್ಕರ್​ ತನಗೆ ಯಾವತ್ತೂ ಮೋಸ ಮಾಡಲ್ಲ. ಜೊತೆಗೆ ಅಡುಗೆಯಲ್ಲಿ ಪರಿಣಿತಳು’ ಹಾಗಾಗಿ ಒಡನಾಡಿಯಾಗಿ ಆರಿಸಿಕೊಳ್ಳುತ್ತಿದ್ದೇನೆ ಎಂದು ಕುಕ್ಕರ್​ ಜೊತೆ ಮದುವೆಯ ಬಗ್ಗೆ ಈತ ಹೇಳಿಕೊಂಡಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.