ಹೈದರಾಬಾದ್​:  ಪೋಷಕರೇ ತಮ್ಮ ಮಕ್ಕಳಿಗೆ ಚಾಕೋಲೇಟ್‌ ನೀಡುವ ಮುನ್ನ ಎಚ್ಚರವಾಗಿರಿ. ಇದೀಗ ಮತ್ತೇ ಡೈರಿ ಮಿಲ್ಕ್​ ಚಾಕೋಲೇಟ್​ನಲ್ಲಿ ಹುಳುಗಳು ಪತ್ತೆಯಾಗಿವೆ.ಕೆಲ ದಿನಗಳ ಹಿಂದೆಯಷ್ಟೇ ಹೈದರಾಬಾದ್​ನ ಗ್ರಾಹಕರೊಬ್ಬರು ಡೈರಿ ಮಿಲ್ಕ್​ ಚಾಕೋಲೇಟ್​ನಲ್ಲಿ ಹುಳುಗಳಿರುತ್ತವೆ ಎಂದು ಎಚ್ಚರಿಸಿದ್ದರು. ಇದೀಗ ಮಡಿಕೇರಿಯ ಸುಲ್ತಾನ್ ಎಂಬವರು ಖರೀದಿಸಿದ ಡೈರಿ ಮಿಲ್ಕ್ ಸಿಲ್ಕ್ (ಹ್ಯಾಝಲ್​ನೆಟ್) ಚಾಕೋಲೇಟ್​ನಲ್ಲಿ ಹುಳುಗಳು ಕಂಡು ಬಂದಿವೆ.

ಮಕ್ಕಳಿಗೆಂದು ಖರೀದಿಸಿದ ಈ ಚಾಕೋಲೇಟ್​ ಅನ್ನು ಓಪನ್ ಮಾಡಿದಾಗ ಅದರಲ್ಲಿನ ಹ್ಯಾಝೆಲ್​ನೆಟ್​ಗಳಿಂದ ಹುಳುಗಳು ಹೊರಬರುತ್ತಿರುವುದು ಕಂಡು ಬಂದಿದೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಪೋಷಕರು ಈ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದ್ದಾರೆ. ಏಕೆಂದರೆ ಈ ಚಾಕೋಲೇಟ್​ನ ಎಕ್ಸ್​ಪೈರಿ ಡೇಟ್ 22-1-2025 ಇದ್ದು, ಇದಾಗ್ಯೂ ಚಾಕೋಲೇಟ್​ನಲ್ಲಿನ ಡ್ರೈ ಫ್ರೂಟ್​ನಲ್ಲಿ ಹುಳುಗಳು ಪತ್ತೆಯಾಗಿವೆ. ಈಗಾಗಲೇ ಇಂತಹ ಹಲವು ನಿದರ್ಶನಗಳು ನಮ್ಮ ಮುಂದಿವೆ ಹಾಗಾಗಿ ಮಕ್ಕಳ ಆರೋಗ್ಯದ ಮೇಲೆ ಕಾಳಜಿ ಇಡಿ.