ಸ್ಪೇನ್ – ಅಮೆರಿಕದಲ್ಲಿ ಜನಿಸಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ, ಸ್ಪೇನ್ ನ ಮಾರಿಯಾ ಬ್ರಾನ್ಯಾಸ್ ಮೊರೆರಾ ಮಂಗಳವಾರ ತಮ್ಮ 117 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನೆಸ್ ವಿಶ್ವ ದಾಖಲೆ ಹೊಂದಿರುವ ಮಾರಿಯಾ ಬ್ರಾನ್ಯಾಸ್ ಮೊರೆರಾ ತಮ್ಮ 117 ನೇ ವಯಸ್ಸಿನಲ್ಲಿ ನಿಧನರಾದರು.

ಫ್ರೆಂಚ್ ಸನ್ಯಾಸಿನಿ ಲೂಸಿಲ್ ರಾಂಡನ್ (118) ಅವರ ನಿಧನದ ನಂತರ 2023 ರ ಜನವರಿಯಲ್ಲಿ ಬ್ರಾನ್ಯಾಸ್ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಸ್ಥಾನಮಾನವನ್ನು ಗಿನ್ನೆಸ್ ವಿಶ್ವ ದಾಖಲೆಗಳು ಅಧಿಕೃತವಾಗಿ ಅಂಗೀಕರಿಸಿದ್ದವು. ‘ಮಾರಿಯಾ ಬ್ರಾನ್ಯಾಸ್ ನಮ್ಮನ್ನು ಅಗಲಿದ್ದಾರೆ. ನಿದ್ರೆಯಲ್ಲಿ, ಶಾಂತಿಯುತವಾಗಿ ಮತ್ತು ನೋವು ಇಲ್ಲದೆ ಅವರು ಬಯಸಿದಂತೆ ಮೃಪಟ್ಟರು ಎಂದು ಕುಟುಂಬವು ಎಕ್ಸ್ ನಲ್ಲಿ ಬರೆದಿದೆ.

Tot el condol a la família i el seu entorn. Descansa en pau, Maria. Un plaer haver-te conegut. pic.twitter.com/pqCvzfH9KI

— Pere Aragonès i Garcia 🎗 (@perearagones) August 20, 2024