ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಮಾರಿಯಾ ಬ್ರನ್ಯಾಸ್ ಮೊರೆರಾ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. 117 ವರ್ಷ 168 ದಿನ ಬದುಕಿದ್ದ ಮಾರಿಯಾ ವಿಶ್ವದ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದರು. ಆದರೆ ಈಗ ಮಾರಿಯಾ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಖಚಿತಪಡಿಸಿದ್ದಾರೆ.
ಮಾರ್ಚ್ 4, 1907 ರಂದು ಅಮೆರಿಕದಲ್ಲಿ ಜನಿಸಿದ ಮಾರಿಯಾ ಬ್ರನ್ಯಾಸ್, ಬಳಿಕ ಅವರ ಕುಟುಂಬ ಸ್ಪೇನ್‌ಗೆ ತೆರಳಿ ಅಲ್ಲಿ ನೆಲೆಸಿತು. ತನ್ನ ಜೀವಿತಾವಧಿಯಲ್ಲಿ ಎರಡು ಮಹಾಯುದ್ಧಗಳನ್ನು ಕಂಡಿದ್ದ ಮರಿಯಾ ಚಿಕ್ಕ ವಯಸ್ಸಿನಿಂದಲೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಿದ್ದರು.

